
ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಶಾಲಾಭಿವೃದ್ಧಿ ಕಾರ್ಯದ ನಿಮಿತ್ತವಾಗಿ ಪ್ರಸನ್ನ ಶೆಟ್ಟಿ ಬೈಲೂರ್ ಸಾರಥ್ಯದ ತಂಡದಿಂದ ಜನವರಿ 11 ರ ಸಂಜೆ 6 ಗಂಟೆಗೆ ಸರಿಯಾಗಿ ಚರ್ಚ್ ಶಾಲಾ ಮೈದಾನದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ನಾಟಕ ಉಚಿತ ಪ್ರವೇಶವಾಗಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲಾ ಅಧ್ಯಕ್ಷರು ಹೆನ್ರಿ ಮಸ್ಕರೇನಸ್, ಮುಖ್ಯ ಶಿಕ್ಷಕರಾದ ರೇಷ್ಮಾ ರೋಡ್ರಿಗಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರೇಷ್ಮಾ ಶೆಟ್ಟಿ ಗೊರೂರು ಹಾಗೂ ಸದಸ್ಯರು ಕೋರಿಕೊಂಡಿದ್ದಾರೆ.






