23.9 C
Udupi
Sunday, February 1, 2026
spot_img
spot_img
HomeBlogಜನನಿ ಮಿತ್ರ ಮಂಡಳಿ ( ರಿ.) ವಾಂಟ್ರಾಯಿ ಪದವು, ಮ್ಯಾರಥಾನ್ ಓಟ

ಜನನಿ ಮಿತ್ರ ಮಂಡಳಿ ( ರಿ.) ವಾಂಟ್ರಾಯಿ ಪದವು, ಮ್ಯಾರಥಾನ್ ಓಟ

ಪ್ರಧಾನಿ ಆಶಯದಂತೆ, ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಯುವಜನತೆ ಭಾಗವಹಿಸಬೇಕು : ಶಾಸಕ ವಿ. ಸುನಿಲ್ ಕುಮಾರ್

ಕಾರ್ಕಳ : ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ ಪದವು ಇದರ ರಜತ ಸಂಭ್ರಮದ ಪ್ರಯುಕ್ತ ದಿನಾಂಕ 11-01-2026 ರ ಆದಿತ್ಯವಾರದಂದು ನಡೆದ ಮ್ಯಾರಥಾನ್ ಓಟ 2026 ಕ್ಕೆ ಉದ್ಯಮಿಗಳಾದ ಸೀತರಾಮ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮ್ಯಾರಥಾನ್ ಓಟಕ್ಕೆ ಉತ್ತಮ ಪ್ರತಿಕ್ರಿಯೆಯಾಗಿ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಾರೋಪದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್‌ರವರು ಮಾತನಾಡಿ ನಮ್ಮ ದೇಶದ ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರ ಆಶಯದಂತೆ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಯುವಕ ಯುವತಿಯವರು ಭಾಗವಹಿಸುವಂತೆ ಕರೆಕೊಟ್ಟಿದ್ದರು. ಅದರಂತೆ ನಮ್ಮ ಜನನಿ ಮಿತ್ರ ಮಂಡಳಿ, ವಾಂಟ್ರಾಯಿ ಪದವು ಇವರು ಈ ನಿಟ್ಟಿನಲ್ಲಿ ಮ್ಯಾರಥಾನ್ ಓಟ 2026 ಕ್ಕೆ ಚಾಲನೆ ನೀಡಿ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಯಶಸ್ವಿಯಾಗಿ ನಡೆಸಿರುವುದು ಸ್ಫೂರ್ತಿದಾಯಕವಾಗಿದೆ ಎಂದರು. ತದ ನಂತರ ವಿಜೇತರಿಗೆ ನಗದು ಬಹುಮಾನ ಜೊತೆಗೆ ಪ್ರಶಸ್ತಿ ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಸೀತರಾಮ ಶೆಟ್ಟಿ, ಉದ್ಯಮಿಯಾಗಿರುವ ರಾಜೇಶ್ ರಾವ್ ಪರಪು, ಉದ್ಯಮಿಗಳಾದ ನವೀನ್ ದೇವಾಡಿಗ ಕಾಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ಬೇಬಿ ನಾಯ್ಕ, ರಾಜೇಶ್ವರಿ ಶಿಕ್ಷಣ ಸಂಸ್ಥೆ ಸಾಣೂರು ಇದರ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ಮತ್ತು ಪ್ರಣೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಸ್ಥಿತರಿದ್ದ ಎಲ್ಲಾ ಅತಿಥಿ ಗಣ್ಯರಿಗೆ ಸಂಘದ ಅಧ್ಯಕ್ಷರಾದ ದಿವಾಕರ ಬಂಗೇರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿವಾನಂದ ಸುವರ್ಣ ವಂದನಾರ್ಪಣೆಗೈದರು. ಸದಾನಂದರವರು ಕಾರ್ಯಕ್ರಮ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page