ದೇವಸ್ಥಾನದ ಎದುರು ಭಾಗದ ಸುತ್ತುಪೌಳಿಯ ಶಿಲಾನ್ಯಾಸ ಕಾರ್ಯಕ್ರಮ

ಚೋಲ್ಪಾಡಿ ಕಾಬೆಟ್ಟು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನ ಸಮಗ್ರ ಜೀರ್ಣೋದ್ದಾರದ ಅಂಗವಾಗಿ ದೇವಸ್ಥಾನದ ಎದುರು ಭಾಗದ ನೂತನ ಸುತ್ತು ಪೌಳಿಯ ಶಿಲಾನ್ಯಾಸ ಕಾರ್ಯಕ್ರಮವು ಶ್ರೀ ರಾಘವೇಂದ್ರ ಉಪಾಧ್ಯಾಯ ಪ್ರಧಾನ ಆರ್ಚಕರು, ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರು ಇವರ ನೇತೃತ್ವದಲ್ಲಿ ಇಂದು ನಡೆಯಿತು ಈ ಶಿಲಾನ್ಯಾಸ ಸಮಾರಂಭದಲ್ಲಿ ತಾಲೂಕಿನ ಶಾಸಕರಾದ ವಿ. ಸುನಿಲ್ ಕುಮಾರ್, ಮುನಿಯಾಲು ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾರ್ಕಳದ ಖ್ಯಾತ ನ್ಯಾಯಾವಾದಿಗಳಾದ ಎಂ.ಕೆ. ವಿಜಯಕುಮಾರ್, ಸ್ಥಳೀಯ ಪುರಸಭಾ ಸದಸ್ಯೆ ಶ್ರೀಮತಿ ರಹಮತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಾಧವ್ ಭಟ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಏಳಾಡುಗುತ್ತು ಶ್ರೀ ಸುಂದರ ಹೆಗ್ಡೆ, ನವೀನಚಂದ್ರ ಶೆಟ್ಟಿ, ಶ್ರೀ ಸಂಕೇತ್ ಉಪಾಧ್ಯಾಯ ಅನುವಂಶೀಕ ಮೊಕ್ತೆೆೇಸರರು ಹಾಗೂ ಊರಿನ ಭಗವದ್ಭಕ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ MRPL ಸಂಸ್ಥೆಯ ಅನುದಾನದಿಂದ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗ್ರಹವು ಲೋಕಾರ್ಪಣೆಗೊಂಡಿದೆ.
ನಂತರ ಜರುಗಿದ ಸಭೆಯಲ್ಲಿ ಮಾನ್ಯ ಶಾಸಕಾರಾದ ವಿ. ಸುನಿಲ್ ಕುಮಾರ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಒಂದು ಹಂತದ ಜೀರ್ಣೋದ್ಧಾರ ಈಗಾಗಲೇ ಕೈಗೊಳ್ಳಲಾಗಿದ್ದು ಇನ್ನುಳಿದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ರಮಗಳು ತ್ವರಿತವಾಗಿ ನಡೆಯಲು ತನ್ನ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮುನಿಯಾಲು ಉದಯಕುಮಾರ್ ಶೆಟ್ಟಿ ಇವರು ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಗೊಂಡು ಬ್ರಹ್ಮ ಕಲಶೋತ್ಸವಗಳು ನಡೆಯುತ್ತಿದ್ದು ನಮ್ಮ ತಾಲೂಕಿನ ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ತತ್ಸಂಬಧ ಎಲ್ಲಾ ಪೂರ್ಣ ಕಾಮಾಗಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು, ಖ್ಯಾತ ನ್ಯಾಯಾವಾದಿಗಳಾದ. ಎಂ.ಕೆ. ವಿಜಯ ಕುಮಾರ್ ತಮ್ಮ ಭಾಷಣದಲ್ಲಿ ಈ ದೇವಸ್ಥಾನ ಈ ಹಿಂದೆ ದಿವಂಗತ ಶ್ರೀನಿವಾಸ ಉಪಾಧ್ಯಾಯ ಇವರ ನೇತೃತ್ವದಲ್ಲಿ ಹಲವಾರು ಉತ್ತಮ ಸಮಾಜ ಸೇವೆ ಉತ್ಸಾವಾದಿಗಳು ನಡೆಸಿದ್ದನ್ನು ಸ್ಮರಿಸುತ್ತಾ ಈ ದೇವಸ್ಥಾನ ಇದೇ ವಿಜೃಂಭಣೆ ಸ್ಥಿತಿಗೆ ಬಂದು ಭಕ್ತರಿಗೆ, ನೆಮ್ಮದಿ ಭರವಸೆ ನೀಡುವಂತಾಗಲಿ ಎಂದು ಆಶಿಸಿದರು. ಸ್ಥಳಿಯ ಪುರಸಭೆ ಸದಸ್ಯೆ ಶ್ರೀಮತಿ ರೆಹಮತರವರು ತಾವು ಚಿಕ್ಕಂದಿನಿಂದ ಈ ದೇವಸ್ಥಾನದ ಎಲ್ಲಾ ಉತ್ಸವಾದಿ, ದೀಪೋತ್ಸವ ಇತ್ಯಾದಿಗಳಿಗೆ ಬರುತ್ತಿದ್ದು, ಒಂದು ಹೊತ್ತಿನ ಊಟಕ್ಕೆ ಕಷ್ಟವಿರುವಾಗ ಈ ದೇವಸ್ಥಾನ ನನಗೆ ಅನ್ನ ನೀಡಿದ್ದನ್ನು ಸ್ಮರಿಸಿದರು. ಈ ಹಿಂದೆ ಹರಿಭಟ್ರು ಎಂದು ಪ್ರಖ್ಯಾತರಾಗಿದ್ದು ಹೂವಿನ ಪೂಜೆ ಸಂದರ್ಭದಲ್ಲಿ ದೇವಸ್ಥಾನದ ಘಂಟೆ ಬಾರಿಸಲು ಮನೆಯಿಂದ ಓಡಿ ಬಂದು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ನೆನೆಸಿದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಾಧವ ಭಟ್ ರವರು ಆಗಮಿಸಿ ಎಲ್ಲಾ ಅಭ್ಯಾಗತರನ್ನು ಸ್ವಾಗತಿಸುತ್ತಾ, ಕೈಗೊಳ್ಳಲಾಗದ ಎಲ್ಲಾ ಕಾರ್ಯಕ್ರಮಗಳಿಗೆ ನಂತರ ನಡೆಯಬೇಕಾದ ಬ್ರಹ್ಮಕಲೋಶೋತ್ಸವ ಗಳಿಗೆ ಎಲ್ಲರೂ ಸಹಕಾರವನ್ನು ಕೋರಿದರು. ರಾಘವೇಂದ್ರ ಉಪಾಧ್ಯಾಯ ಪ್ರಧಾನ ಅರ್ಚಕರು, ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಇವರು ತಮ್ಮ ಭಾಷಣದಲ್ಲಿ ಈ ದೇವಸ್ಥಾನದ ಆರ್ಚಕರಾಗಿ ಉಪಾಧ್ಯಾಯ ಕುಟುಂಬಸ್ಥರು ತಲ ತಲಾಂತರಗಳಿಂದ ಸೇವೆ ಸಲ್ಲಿಸುತ್ತಿದ್ದು. ಈ ದೇವಸ್ಥಾನ ಜೀರ್ಣೋದ್ಧಾರಗೊಂಡು ಎಲ್ಲಾ ರೀತಿಯಲ್ಲಿ ದೇವರು ಶಾಶ್ವತವಾಗಿ ನೆಲೆಸಿ ಭಕ್ತರ ಇಷ್ಟಾರ್ಥ ಸಿದ್ಧಿಸುವಂತೆ ಆಗಲಿ ಎಂದು ಆಶಿಸಿದರು.
ಸಮಾರಂಭವು ಕುಮಾರಿ ಶರಧಿ ಉಪಾಧ್ಯಾಯ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂದೇಶ ಉಪಾಧ್ಯಾಯ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು ಕೊನೆಯಲ್ಲಿ ಸುಧೀರ್ ಶೆಟ್ಟಿಗಾರ್ ಕಾರ್ಯದರ್ಶಿರವರು ವಂದನಾರ್ಪಣೆ ಮಾಡಿದರು. ಸಂಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.





