
ಚೆನ್ನೈ: ಚೆನ್ನೈನ ನಿವಾಸಿಯಾದ ದೇವರಾಜ್ ಎಂಬುವವರ ತಾಯಿ ಅವರ ಮೊಮ್ಮಗಳ ಮದುವೆಗಾಗಿ ಡೈಮಂಡ್ ನೆಕ್ಲೇಸನ್ನು ಮಾಡಿಸಿದ್ದರು,ನೆಕ್ಲೇಸ್ ಆಕಸ್ಮಿಕವಾಗಿ ಕಸದ ಬುಟ್ಟಿ ಬಿದ್ದಿದ್ದು ತಿಳಿಯದಾಗಿತ್ತು.ಹುಡುಕಲು ಶುರು ಮಾಡಿದ ನಂತರ ಪೌರ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ನೀಡಿ ಹುಡುಕಲು ತಿಳಿಸಿದ್ದರು.
ಚೆನ್ನೈ ನಗರದ ಕಸ ಸಾಗಣೆ ಗುತ್ತಿಗೆ ಪಡೆದಿರುವ ಸಂಸ್ಥೆ ಹಾಗೂ ಅದರ ಕಾರ್ಮಿಕರಾದ ಜೆ ಅಂಥೋನಿಸ್ವಾಮಿ, ಚಾಲಕ ಅರ್ಬೇಸರ್ ಸುಮೀತ್ ದೇವರಾಜ್ ಮನೆ ಸಮೀಪದ ಕಸದ ತೊಟ್ಟಿಯಲ್ಲಿ ವಜ್ರದ ನೆಕ್ಲೇಸ್ಗಾಗಿ ತೀವ್ರವಾಗಿ ಹುಡುಕಾಟ ನಡೆಸಿದಾಗ ನೆಕ್ಲೇಸ್ ಸಿಕ್ಕಿದೆ. ಕಸದ ತೊಟ್ಟಿಯಲ್ಲಿ ಹೂವಿನ ಹಾರದ ಜೊತೆಗೆ ಈ ನೆಕ್ಲೇಸ್ ಸಿಕ್ಕಿ ಹಾಕಿಕೊಂಡಿತ್ತು.ನಂತರ ದೇವರಾಜ್ ಅವರು ತನ್ನ ನೆಕ್ಲೇಸ್ ಹುಡುಕಿ ಕೊಡುವಲ್ಲಿ ಸಹಾಯ ಮಾಡಿದ ಪೌರ ಕಾರ್ಮಿಕರು ಹಾಗೂ ಕಸ ಸಾಗಣೆ ಸಂಸ್ಥೆಯ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ.








