
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಕಾರ್ಕಳ ಕಸಬಾ ಗ್ರಾಮದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಬಿ ಜಯರಾಮ್ ನಾಯಕ್ ಇವರು ಕಾರ್ಕಳ ತಾಲೂಕಿನ ಕಾಬೆಟ್ಟು, ಚೇತನಹಳ್ಳಿಯ ನಿವಾಸಿ, ಮಹೇಶ್ ಎನ್ ಇವರ ವಿರುದ್ಧ ರೂಪಾಯಿ 1,50,000/- (ರೂಪಾಯಿ ಒಂದು ಲಕ್ಷದ ಐವತ್ತು ಸಾವಿರ ಮಾತ್ರ ಕ್ಕೆ ದಾಖಲಿಸಿದ ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್.ಸಿ ಇವರು ಆರೋಪಿಯಾದ ಮಹೇಶ್ ಎನ್ ಇವರನ್ನು ಸರಿಯಾದ ಸಾಕ್ಷದರಗಳಿಂದ ಪ್ರಕರಣ ಸಾಬೀತಾಗದ ಕಾರಣ ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ಕಾರ್ಕಳದ ನ್ಯಾಯಾವಾದಿ ರವಿಶಂಕರ್ ಬಿ.ಎಂ ಇವರು ವಾದಿಸಿದ್ದರು.