
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಮುಡಾರು ಗ್ರಾಮದ ಆದಿಲ್ ಸಾಹೇಬ್ ಇವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು, ಪಾಣೆ ಮಂಗಳೂರು ಗ್ರಾಮದ, ನೌಫಲ್ ಅಹಮದ್ ಸಿರಜುದ್ದೀನ್ ಇವರ ವಿರುದ್ಧ ವಾಹನ ಮಾರಾಟದ ವ್ಯವಹಾರದಲ್ಲಿ ಮೋಸ ಆಗಿದೆ ಎನ್ನುವ ಕುರಿತು ರೂಪಾಯಿ 4,00,000/- (ರೂಪಾಯಿ ನಾಲ್ಕು ಲಕ್ಷ ಮಾತ್ರ) ಗೆ ದಾಖಲಿಸಿದ ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್.ಸಿ ಇವರು ಆರೋಪಿಯಾದ ನೌಫಲ್ ಅಹಮದ್ ಸಿರಜುದ್ದೀನ್ ಇವರನ್ನು ಸರಿಯಾದ ಸಾಕ್ಷದರಗಳಿಂದ ಪ್ರಕರಣ ಸಾಬೀತಾಗದ ಕಾರಣ ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ಕಾರ್ಕಳದ ನ್ಯಾಯಾವಾದಿ ರವಿಶಂಕರ್ ಬಿ.ಎಂ ಇವರು ವಾದಿಸಿದ್ದರು.