26.3 C
Udupi
Monday, March 23, 2026
spot_img
spot_img
HomeBlogಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಕೊಟ್ಟ 15 ದಿನದ ಬಳಿಕವಷ್ಟೆ ದೂರು ದಾಖಲಿಸಲು ಅ‍ವಕಾಶ

ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಕೊಟ್ಟ 15 ದಿನದ ಬಳಿಕವಷ್ಟೆ ದೂರು ದಾಖಲಿಸಲು ಅ‍ವಕಾಶ

ಬೆಂಗಳೂರು : ಹೈಕೋರ್ಟ್‌ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಒಂದನ್ನು ಹೊರಡಿಸಿದ್ದು ಅದೇನೆಂದರೆ ಸಾಲಗಾರ ಲೀಗಲ್‌ ನೋಟಿಸ್‌ ಸ್ವೀಕರಿಸಿದ 15 ದಿನದ ಒಳಗೆ ಸಾಲ ನೀಡಿದಾತ ದಾಖಲಿಸಿದ ದೂರಿಗೆ ಮಾನ್ಯತೆ ಇರುವುದಿಲ್ಲ. 15 ದಿನ ಮುಗಿದ ನಂತರದ ಒಂದು ತಿಂಗಳಲ್ಲಿ ಚೆಕ್‌ ಬೌನ್ಸ್‌ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿದ ಮೇಲೆ ಲೀಗಲ್‌ ನೋಟಿಸ್‌ ಸ್ವೀಕರಿಸಿದ 15 ದಿನಗಳ ಒಳಗೆ ಸಾಲ ನೀಡಿದಾತ ದೂರು ದಾಖಲಿಸಿರುವುದನ್ನು ಗಮನಿಸಿದ ಹೈಕೋರ್ಟ್‌, ಹೊಸದಾಗಿ ದೂರು ದಾಖಲಿಸುವಂತೆ ದೂರುದಾರನಿಗೆ ತಿಳಿಸಿದೆ. ಜತೆಗೆ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಹೊಂಗಸಂದ್ರ ನಿವಾಸಿ ಆರ್ಮುಗಂ (38) ವ್ಯಾಪಾರಕ್ಕೆಂದು ದೊಡ್ಡತೋಗೂರು ನಿವಾಸಿ ಆನಂದ್‌ ಎಂಬುವರಿಂದ ಒಂದು ಲಕ್ಷ ರೂ ಸಾಲ ಪಡೆದಿದ್ದರು. 2015ರ ಡಿ.10ರಂದು ಹಣ ಹಿಂದಿರುಗಿಸುವುದಾಗಿ ಖಾತರಿ ನೀಡಿ ಚೆಕ್‌ ನೀಡಿದ್ದರು. ಚೆಕ್‌ ಅನ್ನು ಬ್ಯಾಂಕಿ ಹಾಕಿದಾಗ ಬೌನ್ಸ್‌ ಆಗಿತ್ತು. ಇದರಿಂದ 2016ರ ಜ.13ರಂದು ಆನಂದ್‌, ನಗರದ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್ಸ್‌ ಆಕ್ಟ್‌-1881ರ (ಎನ್‌ಐ ಆಕ್ಟ್‌) ಸೆಕ್ಷನ್‌ 138 ಪ್ರಕಾರ ಚೆಕ್‌ಬೌನ್ಸ್‌ ಅಪರಾಧಡಿ ಆರ್ಮುಗಂ ಅನ್ನು ದೋಷಿಯಾಗಿ ನ್ಯಾಯಾಲಯ ತೀರ್ಮಾನಿಸಿತ್ತು. ಜೊತೆಗೆ, 1.75 ಲಕ್ಷ ರು. ಪಾವತಿಸಬೇಕು ಅಥವಾ 6 ತಿಂಗಳು ಸಾಧಾರಣ ಜೈಲು ಅನುಭವಿಸಬೇಕು ಎಂದು ಆರೋಪಿಗೆ ನಿರ್ದೇಶಿಸಿ 2017ರ ಏ.3ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿದ್ದ ಮೇಲ್ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿದ್ದರಿಂದ ಆರ್ಮುಗಂ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಚೆಕ್‌ ಬೌನ್ಸ್‌ ಆದ ನಂತರ 2016ರ ಡಿ.30ರಂದು ಆರ್ಮುಗಂ ಅವರಿಗೆ ಲೀಗಲ್‌ ನೋಟಿಸ್‌ ನೀಡಿದ್ದ ಆನಂದ್‌ 15 ದಿನಗಳಲ್ಲಿ ಹಣ ಪಾವತಿಸಲು ಸೂಚಿಸಿದ್ದರು. ಆರ್ಮುಗಂ 2016ರ ಜ.1ರಂದು ನೋಟಿಸ್‌ ಸ್ವೀಕರಿಸಿದ್ದರು. ಜ.13ರಂದು ಆನಂದ್‌ ಚೆಕ್‌ ಬೌನ್ಸ್‌ ದೂರು ದಾಖಲಿಸಿದ್ದರು. ಎನ್‌ಐ ಕಾಯ್ದೆ ಸೆಕ್ಷನ್‌ 138(ಸಿ) ಅನ್ವಯ ಲೀಗಲ್‌ ನೋಟಿಸ್‌ ಸ್ವೀಕರಿಸಿದ ನಂತರದ 15 ದಿನಗಳ ಒಳಗೆ ಚೆಕ್‌ ಮೊತ್ತ ಪಾವತಿಸದಿದ್ದರೆ, ನಂತರದ ಒಂದು ತಿಂಗಳಲ್ಲಿ ಲಿಖಿತವಾಗಿ ದೂರು ದಾಖಲಿಸಬೇಕು. ಆದರೆ, ಲೀಗಲ್‌ ನೋಟಿಸ್‌ ಸ್ವೀಕರಿಸಿದ ನಂತರದ 15 ದಿನಗಳ ಮುನ್ನವೇ ಎನ್‌ಐ ಕಾಯ್ದೆ ಸೆಕ್ಷನ್‌ 138 ಅಡಿ ಚೆಕ್‌ ಬೌನ್ಸ್‌ ದೂರು ದಾಖಲಿಸಿದರೆ, ಅದು ಮಾನ್ಯವಾಗುವುದಿಲ್ಲ. ಅಂತಹ ದೂರು ರದ್ದುಪಡಿಸಲು ಅರ್ಹವಾಗಿರುತ್ತದೆ ಎಂದು ಪೀಠವು ತಿಳಿಸಿದೆ.

ಇದೇ ಕಾರಣ ಮುಂದಿಟ್ಟು ದೂರು ರದ್ದುಪಡಿಸಿ ನ್ಯಾಯಾಲಯ ಆದೇಶ ಹೊರಡಿಸಿದ ದಿನದಿಂದ ಒಂದು ತಿಂಗಳೊಳಗೆ ಚೆಕ್‌ ಪಡೆದವರು ಹೊಸದಾಗಿ ದೂರು ಸಲ್ಲಿಸಬಹುದು. ಹೊಸ ದೂರು ದಾಖಲಿಸುವಲ್ಲಿ ಆದ ವಿಳಂಬವನ್ನು ಎನ್‌ಐ ಕಾಯ್ದೆಯ ಸೆಕ್ಷನ್ 142 (b) ಅನ್ವಯ ಮನ್ನಿಸಬಹುದು. ಸಾಲ ನೀಡಿದವರು ಸತತ ಎರಡನೇ ದೂರು ಸಲ್ಲಿಸಿದರೆ, ಆಗ ಚೆಕ್‌ ನೀಡಿದ (ಆರೋಪಿ)ವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ, ಚೆಕ್‌ ನೀಡಿದವರು ದಂಡನಾ ಕ್ರಮದಿಂದ ಮುಕ್ತರಾಗುವುದಿಲ್ಲ ಎಂದು ತಿಳಿಸಿದ ಕೋರ್ಟ್‌, 19ನೇ ಎಸಿಎಂಎಂ ನ್ಯಾಯಾಲಯದ ಆದೇಶವನ್ನು ತಿದ್ದುಪಡಿಮಾಡಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page