
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಮಲ್ಲೇನಹಳ್ಳಿ ಯಲ್ಲಿ ಕುಟುಂಬವೊಂದು ಕತ್ತು ಸೀಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಮೋಹನ್ ಚೀಟಿ ವ್ಯವಹಾರದಲ್ಲಿ ವಿಪರೀತ ಸಾಲ ಮಾಡಿಕೊಂಡಿದ್ದು ಸಾಲಗಾರರ ಕಾಟಕ್ಕೆ, ತಾಯಿ ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿ ತಾನು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ವಿಚಾರವನ್ನು ಆತ್ಮಹತ್ಯೆಗೂ ಮುನ್ನ ವಿಡಿಯೋ ಮೂಲಕ ತನ್ನ ಸಂಬಂಧಿಕರಿಗೂ ಕೂಡ ಕಳುಹಿಸಿದ್ದು, ವಿಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ಮನೆಯ ಬಳಿ ಬಂದ ವೇಳೆ ತಾಯಿ ಆಶಾ (55), ಅಕ್ಕ ವರ್ಷಿತ (34), ಮೃತಪಟ್ಟಿದ್ದು, ಅಕ್ಕನ ಮಗ ಮಯಾಂಕ್(11) ಮೋಹನ್ (27) ನೆಲದ ಮೇಲೆ ಒದ್ದಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಅತಿಯಾದ ಸಾಲ ಘಟನೆಗೆ ಕಾರಣ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು,
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






















































