
ಕನ್ನಡ ಸಿನಿಮಾ ಜಗತ್ತು ಭಾರತೀಯ ಚಿತ್ರರಂಗದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಚಿತ್ರರಂಗವು ಸಿಂಹಪಾಲು ಪ್ರಶಸ್ತಿಯನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ಹಾಗೆಯೇ ಇಂದು ಪ್ರಬುದ್ಧ ಯುವ ಮನಸ್ಸುಗಳು ಸಾಮಾಜಿಕ ಕಳಕಳಿಯ ವಿಚಾರಗಳ ಮೂಲಕ ಸಮಾಜದ ಕಣ್ತೆರೆಸುವಂತಹ ಒಳ್ಳೆಯ ಕಥೆಯ ಸಿನಿಮಾಗಳನ್ನು ನೀಡುತ್ತಿದೆ. ಇದು ಒಂದು ಒಳ್ಳೆಯ ಬೆಳವಣಿಗೆ ಇಂತಹ ಚಿತ್ರೋತ್ಸವವು ಕಲಾತ್ಮಕ ಚಿತ್ರಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ ಎಂದು ರಂಗಭೂಮಿ ಕಲಾವಿದೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಿ ಚಂಪಾ ಶೆಟ್ಟಿ ಯವರು ಹೇಳಿದರು.
ಅವರು ರಂಗ ಸಂಸ್ಕೃತಿ ಕಾರ್ಕಳ ಬೆಳ್ಳಿ ಮಂಡಳ ಕಾರ್ಕಳ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಸಂಯೋಜಿತ ಕಾರ್ಕಳ ಚಿತ್ರೋತ್ಸವ ಅಮೃತವರ್ಷಿಣಿ 2024 ರಾಷ್ಟ್ರೀಯ ಪುರಸ್ಕಾರ ಪಡೆದ ಚಿತ್ರಗಳ ಹಬ್ಬದ ಎರಡನೇ ದಿನದ ಚಿತ್ರ ಪ್ರದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದರು.
ಚಂಪಾ ಶೆಟ್ಟಿಯವರು ಅಮ್ಮಚ್ಚಿ ಎಂಬ ನೆನಪು ಸಿನಿಮಾದ ನಿರ್ದೇಶಕರೂ ಆಗಿ ಜನಮಾನಸದಲ್ಲಿ ಮೆಚ್ಚುಗೆ ಪಡೆದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗ ಸಂಸ್ಕೃತಿ ಅಧ್ಯಕ್ಷ ಎಸ್ ನಿತ್ಯಾನಂದ ಪೈ ವಹಿಸಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು
ಮುಖ್ಯ ಅತಿಥಿಯಾಗಿ ರಂಗಭೂಮಿ ಸಿನಿಮಾ ನಟ ಪ್ರಕಾಶ್ ಶೆಟ್ಟಿ ಯವರು ಉಪಸ್ಥಿತರಿದ್ದರು. ರಂಗ ಸಂಸ್ಕೃತಿ ಉಪಾಧ್ಯಕ್ಷ ರಾಮಚಂದ್ರ ಟಿ ನಾಯಕ್ ಸಂಚಾಲಕ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸಹ ಸಂಚಾಲಕ ನಾಗೇಶ್ ನಲ್ಲೂರು ಸದಸ್ಯ ರಂಗ ನಿರ್ದೇಶಕ ಚಂದ್ರನಾಥ ಬಜಗೋಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿರ್ದೇಶಕಿ ಚಂಪಾ ಶೆಟ್ಟಿಯವರನ್ನು ರಂಗ ಸಂಸ್ಕೃತಿಯು ಸನ್ಮಾನ ಮಾಡಿ ಅಭಿನಂದಿಸಿದರು.ಸದಸ್ಯ ಶಿವಸುಬ್ರಹ್ಮಣ್ಯ ಭಟ್ ಸಹಕರಿಸಿದರು. ಗಣೇಶ್. ಜಾಲ್ಸೂರು ಕಾರ್ಯಕ್ರಮ ನಿರ್ವಹಿಸಿದರು.





