27.1 C
Udupi
Wednesday, September 3, 2025
spot_img
spot_img
HomeBlogಚಿಣ್ಣರಬಿಂಬ ಮುಂಬಯಿ ಮೀರಾರೋಡ್ ಶಿಬಿರ : ಅಗಸ್ಟ್ 24 ರಂದು ಮಕ್ಕಳ ಉತ್ಸವ, ಪ್ರತಿಭಾನ್ವೇಷಣೆ ಸ್ಪರ್ಧೆ

ಚಿಣ್ಣರಬಿಂಬ ಮುಂಬಯಿ ಮೀರಾರೋಡ್ ಶಿಬಿರ : ಅಗಸ್ಟ್ 24 ರಂದು ಮಕ್ಕಳ ಉತ್ಸವ, ಪ್ರತಿಭಾನ್ವೇಷಣೆ ಸ್ಪರ್ಧೆ

ಚಿಣ್ಣರಬಿಂಬ ಮುಂಬಯಿ ಇದರ ಶಿಬಿರಗಳಲ್ಲಿ ಒಂದಾದ ಮೀರಾ ರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆಯು
ಅಗಸ್ಟ್ 24 ರಂದು ರವಿವಾರ ಮಧ್ಯಾಹ್ನ 1 ಗಂಟೆಯಿಂದ ನ್ಯೂ ಸೈಂಟ್ ಆಗ್ನೆಸ್ ಹೈಸ್ಕೂಲ್
ಶಕ್ತಿನಗರ ನಿಯರ್ ಎಸ್ ಎನ್ ಕಾಲೇಜ್ ಬೈಂದರ್ ಪೂರ್ವ ದಲ್ಲಿ ನಡೆಯಲಿದೆ.

ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು
Rai Sumati Educational Trust, ಸೈಂಟ್ ಆಗ್ನೆಸ್ ಇಂಗ್ಲೀಷ್ ಹೈಸ್ಕೂಲ್ ,K S ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜ್ ನ ಕಾರ್ಯಾಧ್ಯಕ್ಷರಾಗಿರುವ ಆಗಿರುವ Dr. ಅರುಣೋದಯ ರೈ ಬಿಳಿಯೂರು ಗುತ್ತು ಇವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ಸ್ ಸಂಘ ಮುಂಬೈ ಮೀರಾ ಬೈಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ರಮೇಶ ಎಂ ಶೆಟ್ಟಿ ಸಿದ್ಧಕಟ್ಟೆಯವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ಸ್ ಫೋರಂ ಮೀರಾ ಭಯಂದರ್ ವಿಭಾಗದ ಅಧ್ಯಕ್ಷರಾಗಿರುವ ಶ್ರೀಯುತ ಉದಯ್ ಎಮ್ ಶೆಟ್ಟಿ ಮಾಲಾರ್ ಬೀಡು, ಮೀರಾ ರೋಡ್ ಶಿಬಿರದ ಹಿರಿಯ ವಿದ್ಯಾರ್ಥಿಗಳಾದ
CA firm ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿರುವ CA ಶ್ರೀರಕ್ಷಾ ಶೆಟ್ಟಿ, TCS ಕಂಪೆನಿಯಲ್ಲಿ AI ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ನಿರೀಕ್ಷಾ ಶೆಟ್ಟಿ, ಆಗಮಿಸಲಿದ್ದಾರೆ.

ಕೃಷ್ಣವೇಷ ಸ್ಪರ್ಧೆ ಕಾರ್ಯಕ್ರಮವನ್ನು ಮೊಟ್ಟಮೊದಲ ಬಾರಿಗೆ ಚಿಣ್ಣರ ಬಿಂಬದಲ್ಲಿ ಪರಿಸರದ ತುಳು ಕನ್ನಡಿಗರ ಮಕ್ಕಳಿಗೆ ಏರ್ಪಡಿಸಲಾಗಿದೆ..ಹಾಗೂ ಶಿಬಿರ ಮಟ್ಟದಲ್ಲಿ ಭಾವಗೀತೆ , ಜಾನಪದ ಗೀತೆ , ಭಾಷಣ,ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ, ಛದ್ಮವೇಷ ಸ್ಪರ್ಧೆ, ಪಾಲಕರ ದೇಶಭಕ್ತಿಗೀತೆ , ಸ್ಪರ್ಧೆಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದೆ.

ಚಿಣ್ಣರ ಬಿಂಬ ಸಾವಿರಾರು ಮಕ್ಕಳಿಗೆ ತಮ್ಮಲ್ಲಿರುವ ಪ್ರತಿಭೆ ,ಕೌಶಲ್ಯವನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಧನಾತ್ಮಕ ಸಾಧನೆ. ಚಿಣ್ಣರಬಿಂಬದ ಶಿಬಿರಗಳಲ್ಲೊಂದಾದ ಮೀರಾ ರೋಡ್ ಶಿಬಿರದ ಚಿಣ್ಣರಿಗೆ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಭಾಗವಹಿಸಿ ಚಿಣ್ಣರನ್ನು ಪ್ರೋತ್ಸಾಹಿಸುವಂತೆ ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page