27.8 C
Udupi
Friday, March 14, 2025
spot_img
spot_img
HomeBlogಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ, ಸಂವಿಧಾನ ಬದ್ಧವಾಗಿರಬೇಕೇ ವಿನಃ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ವಾಗಬಾರದು

ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ, ಸಂವಿಧಾನ ಬದ್ಧವಾಗಿರಬೇಕೇ ವಿನಃ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ವಾಗಬಾರದು

ಕಾರ್ಕಳ ಕಾಂಗ್ರೆಸ್ ವಿರೋಧ ಮನ ಸ್ಥಿತಿಯಿಂದ ಹೊರಬಂದು, ಅಭಿವೃದ್ಧಿಗೆ ಕೈ ಜೋಡಿಸಲಿ: ರವೀಂದ್ರ ಮೊಯ್ಲಿ

ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಸಂವಿಧಾನ
ಬದ್ಧವಾಗಿರಬೇಕೇ ವಿನಃ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರುಗಳುಗೆ ಗಂಜಿ ಕೇಂದ್ರವಾಗಬಾರದದು.
ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರದ
ಚುಕ್ಕಾಣಿ ಹಿಡಿದ ರಾಜ್ಯ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ
ಅನುಷ್ಠಾನದಲ್ಲಿ ಎಡವಿರುವುದು ಮಾತ್ರವಲ್ಲದೇ ರಾಜ್ಯದಲ್ಲಿ
ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿರುವುದು ಈಗಾಗಲೇ
ಜಗತ್ ಜಾಹಿರವಾಗಿದ್ದು, ಭಾರತೀಯ ಜನತಾ ಪಾರ್ಟಿಯು ಪಂಚ
ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಬಹುದಾದ ಬಾಧಕಗಳ ಬಗ್ಗೆ
ವಿರೋಧ ವ್ಯಕ್ತಪಡಿಸಿತ್ತೇ ವಿನಃ ಪಂಚ ಗ್ಯಾರೆಂಟಿಗಳನ್ನು
ವಿರೋಧಿಸಿಲ್ಲ. ಇದೀಗ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ
ಯೋಜನೆಯ ಅನುಷ್ಠಾನದಲ್ಲಿ ಎಡವಿದ್ದು, ಸಂಪನ್ಮೂಲ ಹೊಂದಿಸಲು
ಒದ್ದಾಡುತ್ತಿದ್ದರೂ ಅದಕ್ಕೊಂದು ಅನುಷ್ಠಾನ ಸಮಿತಿ ರಚಿಸಿ ಅದಕ್ಕೆ
ತನ್ನ ಕಾರ್ಯಕರ್ತಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ
ನೇಮಿಸಿ ಅವರಿಗೆ ವೇತನ ನಿಗಧಿಪಡಿಸಿ ಜನರ ತೆರಿಗೆಯ ಹಣ ಕಾಂಗ್ರೇಸ್
ಕಾರ್ಯಕರ್ತರ ಜೇಬಿನ ಪಾಲಾಗುತಿದ್ದು, ಈ ರೀತಿ ತೆರಿಗೆಯ ಹಣ
ಪೋಲಾಗುತ್ತಿರುವುದನ್ನು ವಿಧಾನಸಭೆಯಲ್ಲಿ ಶಾಸನಬದ್ಧವಾಗಿ
ಪ್ರಶ್ನಿಸಲಾಗಿತ್ತು ಮತ್ತು ಇದು ಒಬ್ಬ ಜವಬ್ದಾರಿಯುತ ಶಾಸಕನ
ಕರ್ತವ್ಯ ಕೂಡ ಆಗಿದೆ. ಅಂಬೇಡ್ಕರ್ ರಚಿತ ಭಾರತದ ಸಂವಿಧಾನದ
ಪ್ರಕಾರ ನಿಯಮಗಳ ಆಯ್ಕೆಗೊಂಡ ಶಾಸಕರ
ಸ್ಥಾನಮಾನಗಳ ಬಗ್ಗೆ ಮಾನದಂಡ ಹಾಗೂ ಅವರಿಗಿರುವ
ಅಧಿಕಾರಗಳ ಬಗ್ಗೆ ತಿಳಿ ಹೇಳಿದ್ದು, ಅದಕ್ಕೆ ಚ್ಯುತಿ ಬಂದಾಗ ಶಾಸನ
ಸಭೆಯಲ್ಲಿ ಪ್ರಶ್ನಿಸುವುದು ಶಾಸಕನ ಹಕ್ಕು ಮತ್ತು ಕರ್ತವ್ಯ.
ಕಾರ್ಕಳ ತಾಲೂಕಿನ ಕಾಂಗ್ರೇಸ್‌ನ್ ನಾಯಕರೆನೆಸಿಕೊಂಡವರು
ಉಡುಪಿ ಜಿಲ್ಲಾ ಅನುಷ್ಠಾನ ಸಮಿತಿಯಲ್ಲೂ
ಉಪಾಧ್ಯಕ್ಷರಾಗಿದ್ದುಕೊಂಡು ವೇತನ ಪಡೆಯುವುದು ಎಷ್ಟರ
ಮಟ್ಟಿಗೆ ಸರಿ? ಈ ಬಗ್ಗೆ ಕಾಂಗ್ರೇಸ್ ನಾಯಕರು ಆತ್ಮ ವಿಮರ್ಶೆ
ಮಾಡಿಕೊಳ್ಳಲಿ.
ಕಾಂಗ್ರೇಸ್ ನಾಯಕರುಗಳು ಪುತ್ತೂರು ತಾಲೂಕಿನಲ್ಲಿ
ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಬಜೆಟ್ ನಲ್ಲಿ
ಘೋಷಣೆಯಾದಾಗ ಪುತ್ತೂರು ಶಾಸಕನ ಅಭಿನಂದಿಸುವ
ಭರದಲ್ಲಿ ಈ ಬೇಡಿಕೆ ಸುಮಾರು ಒಂದುವರೆ ದಶಕಗಳ
ಹಿಂದಿನದ್ದು, ಇದಕ್ಕೆ ಈ ಹಿಂದಿನ ಶಾಸಕರುಗಳ ಪ್ರಯತ್ನ ಕೂಡ ಇದೆ ಎನ್ನುವುದನ್ನು ಮರೆತು ಬಾಯಿ ಚಪಲಕ್ಕಾಗಿ ಕಾರ್ಕಳ
ಶಾಸಕರ ಬಗ್ಗೆ ಆಡಿರುವ ಮಾತುಗಳು ಖಂಡನೀಯ. ಕಾರ್ಕಳದಲ್ಲಿ
ನಾಲ್ಕು ಬಾರಿ ಶಾಸಕ ಮತ್ತು ಎರಡು ಖಾತೆಗಳ ಮಂತ್ರಿಯಾಗಿ
ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸುನಿಲ್ ಕುಮಾರ್ ರವರಿಗೆ
ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೇಸ್ ನಾಯಕರುಗಳಿಂದ ಪಾಠ
ಕಲಿಯುವ ಅಗತ್ಯವಿಲ್ಲ. ಕಾರ್ಕಳದಲ್ಲಿ ಈಗಾಗಲೇ ಆರಂಭವಾಗಿರುವ ಐಟಿಐ, ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಮಹಿಳಾ ನರ್ಸಿಂಗ್ ಕಾಲೇಜು ಯಾರ ಕಾಲದಲ್ಲಿ ಆಗಿರುತ್ತದೆ ಎನ್ನುವುದನ್ನು ಕಾಂಗ್ರೇಸ್ ನಾಯಕರು ತಿಳಿದುಕೊಳ್ಳುವುದು ಒಳಿತು. ಸುನಿಲ್ ಕುಮಾರ್‌ರವರು ಶಾಸನ ಸಭೆಯಲ್ಲಿ ಒಬ್ಬ ಶಾಸನಬದ್ಧವಾಗಿ ಇರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ
ಮಾತನಾಡಿದರೇ ಹೊರತು ನಿಮ್ಮ ರೀತಿ ಗಂಜಿ ಕೇಂದ್ರಗಳಿಗೆ
ಎಡಕಾಡಲಿಲ್ಲ. ಬರೀ ವಿರೋಧ ಮಾಡಲಿಕ್ಕಾಗಿಯೇ ವಿರೋಧ
ಮಾಡುತ್ತಿರುವ ಮನಸ್ಥಿತಿಯಿಂದ ಹೊರಬಂದು ಕಾರ್ಕಳದ
ಅಭಿವೃದ್ಧಿಗೆ ಕಾಂಗ್ರೇಸ್ ನಾಯಕರುಗಳು ಕೈಜೋಡಿಸಲಿ,
ಇಲ್ಲದ್ದಿದರೆ ಜನತೆಯೇ ನಿಮಗೆ ತಕ್ಕ ಪಾಠಕಲಿಸುವ ದಿನ
ದೂರವಿಲ್ಲ ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿ ವಕ್ತಾರರಾದ ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page