
ಗೋ ಸೇವಾ ಕಾರ್ಯ ಚಟುವಟಿಕೆ ದೇಶಾದ್ಯಂತ ಮಾಡುವ ಉದ್ದೇಶದಿಂದ ಗೋವಿನ ರಕ್ಷಣೆ ಮತ್ತು ಪೋಷಣೆ ಮುಖ್ಯ ವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಯೊಂದು ಜಿಲ್ಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಗತ್ಯ ಇರುದರಿಂದ ತಂಡದ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ ರಮಿತಾ ಸೂರ್ಯವಂಶಿ ಆಯ್ಕೆ ಆಗಿದ್ದಾರೆ. ಮಹಿಳೆಯರಲ್ಲಿ ಸೇವಾ ಮನೋಭಾವನೆ ಜೊತೆ ಹೋರಾಟ ಮನೋಭಾವನೆ ಬೆಳೆಸುವಲ್ಲಿ ಸಮಾಜಮುಖಿ ಆಗಿ ಕೆಲಸ ಮಾಡುವೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ






