
ಗೋವಾ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಮಹೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಇದೀಗ ನವೀನವಾಗಿ ಪ್ರತಿಷ್ಠಾಪಿಸಲಾಗಿರುವ ಶ್ರೀರಾಮ ಪ್ರತಿಮೆಯ ಸುತ್ತಮುತ್ತಲ ಪ್ರದೇಶ ಸಹಿತ ಮಠದ ಆವರಣದಲ್ಲಿ ಅಗತ್ಯ ನಿರ್ಮಾಣ ಹಾಗೂ ಅಂತಿಮ ಹಂತದ ಕಾಮಗಾರಿಗಳನ್ನು ಆರಂಭಿಸುವ ಹಿನ್ನೆಲೆ ಜನವರಿ 2ರಿಂದ ಭಕ್ತರಿಗೆ ತಾತ್ಕಾಲಿಕ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಠದ ಆಡಳಿತ ಸಮಿತಿಯು ಭಕ್ತರ ಭಾವನೆಗಳಿಗೆ ಆಡಳಿತ ಸಮಿತಿ ಸಂಪೂರ್ಣ ಗೌರವ ನೀಡುತ್ತದೆ. ಆದರೂ ತ್ವರಿತ ಕಾಮಗಾರಿ ಹಾಗೂ ಸಾರ್ವಜನಿಕರ ಸುರಕ್ಷೆ ನಿಟ್ಟಿನಲ್ಲಿ ಈ ತಾತ್ಕಾಲಿಕ ನಿರ್ಬಂಧ ಅನಿವಾರ್ಯವಾಗಿದ್ದು ಕಾಮಗಾರಿಗಳು ಪೂರ್ಣಗೊಂಡ ನಂತರ ಮಠ ಪುನರ್ ತೆರೆಯುವ ಕುರಿತು ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.





