
ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ಬೆಂಗಳೂರು ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡಿದ್ದು ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ವೆಲ್ಕಂ ಮಾಡುವ ವೇಳೆ ಪಬ್, ಬಾರ್ ರೆಸ್ಟೋರೆಂಟ್ ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳು:
- ಪಬ್, ಬಾರ್, ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಲು ಫೈಯರ್ ಡಿಪಾರ್ಟ್ಮೆಂಟ್ ಪರ್ಮಿಷನ್ ಪಡೆಯಬೇಕು.
- ಫೈರ್ & ಸೇಫ್ಟಿ ಡಿಪಾರ್ಟ್ಮೆಂಟ್ ಪರ್ಮಿಷನ್ ಇಲ್ಲದಿದ್ರೆ ಬಾರ್ ಪಬ್ ಬಂದ್.
- ಪರ್ಮಿಷನ್ ಇಲ್ಲದೆ ಸರ್ವಿಸ್ ನೀಡಿದರೆ ಕಾನೂನು ಕ್ರಮ.
- ನಿಗದಿ ಮಾಡಿದ ಸಮಯ ಮೀರಿ ಸೇವೆ ನೀಡುವಂತಿಲ್ಲ.
- ಪಬ್ ಬಾರ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಗ್ರಾಹಕರನ್ನು ಸೇರಿಸುವಂತಿಲ್ಲ.
- ಪಾರ್ಟಿ ವೇಳೆ ಹೆಚ್ಚು ಗ್ರಾಹಕರು ಸೇರಿ ಅನಾಹುತ ಸಂಭವಿಸಿದರೆ ಅದಕ್ಕೆ ಮಾಲೀಕರೇ ಜವಾಬ್ದಾರಿ
- ಪ್ರತಿ ಬಾರ್ & ಪಬ್ ನ ಸೆಲೆಬ್ರೇಶನ್ ನಡೆಯೋ ಜಾಗದಲ್ಲಿ ಸಿಸಿಟಿವಿ ಕಡ್ಡಾಯ
- ಮಹಿಳೆಯರ ಸುರಕ್ಷತೆ ಕುರಿತು ಎಚ್ಚರಿಕೆ ವಹಿಸಬೇಕು
ಹೀಗೆ ಹಲವು ರೂಲ್ಸ್ ಗಳನ್ನು ಜಾರಿ ಮಾಡಿ ಪೊಲೀಸರು ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.





