
ಕಾರ್ಕಳ: ಮಾರ್ಚ್ 30 ರಂದು ಗೆಳೆಯರ ಬಳಗ ನೆಲ್ಲಿಗುಡ್ಡೆ ಮುಡಾರು ಇದರ 21ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ನೆಲ್ಲಿಗುಡ್ಡೆ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನದಲ್ಲಿ ನಡೆಯಲಿದ್ದು ಈ ಪ್ರಯುಕ್ತ ಬೆಳಿಗ್ಗೆ 9:00ಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.
ಸಂಜೆ 6 ಗಂಟೆಯಿಂದ 7ರವರೆಗೆ ನೆಲ್ಲಿಗುಡ್ಡೆ ಹೆಪೆಜಾರು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಕುಣಿತ ಭಜನೆ, 7 ರಿಂದ 8 ಗಂಟೆಯವರೆಗೆ ಬಾಲ ವೇದಿಕೆ, ಮಹಿಳಾ ವಿಭಾಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8:30 ರಿಂದ ಸಭಾ ಕಾರ್ಯಕ್ರಮ ಕ್ರಮ ನಡೆಯಲಿದ್ದು ಶಾಸಕ ವಿ ಸುನಿಲ್ ಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಸುರೇಶ್ ಸಾಲಿಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೃತಿ ಡಿ. ಅಧಿಕಾರಿ, ಮುದ್ರಾಡಿ ಗುರು ರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಪೂಜಾರಿ ಸೇರಿದಂತೆ ಸಾಮಾಜಿಕ ಮುಖಂಡರು, ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ಮುಗಿದ ಬಳಿಕ ಸೃಷ್ಟಿ ಕಲಾವಿದರು ಬಜಗೋಳಿ ಅಭಿನಯದ ‘ದೈವದೃಷ್ಟಿ’ ಮತ್ತು ‘ಚಾ ಪರ್ಕ’, ಕಲಾವಿದರು ಕುಡ್ಲ ಅಭಿನಯದ ‘ಏರ್ಲಾ ಗ್ಯಾರಂಟಿ ಅತ್ತ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.



















