
ಸರಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಜನಸಾಮಾನ್ಯರಿಗೆ ದೊರಕದೆ ಇದ್ದ ಕಾರಣ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಈ ಬಗ್ಗೆ ಎಚ್ಚೆತ್ತ ರಾಜ್ಯ ಸರಕಾರ ಇಂದು ನವೆಂಬರ್ ತಿಂಗಳ ಹಣವನ್ನು ಪಲಾನುಭವಿಗಳ ಖಾತೆಗೆ ಜಮೆ ಮಾಡಲಿದೆ. ಡಿಸೆಂಬರ್ ತಿಂಗಳ ಹಣವನ್ನು ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ. ಹಾಗೂ ಇನ್ನು ಮುಂದೆ ಗೃಹಲಕ್ಷ್ಮಿ ಹಣ ತಾಲೂಕು ಪಂಚಾಯತ್ ಇಓ ಗಳ ಮೂಲಕ ಬಿಡುಗಡೆಯಾಗಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಹಿಳೆಯರ ಖಾತೆಗೆ ಹಣ ಹಾಕುತ್ತೇವೆ ನಾವೇನು ಯಾರಿಗೂ ತಪ್ಪಿಸುವುದಿಲ್ಲ. ನಿರ್ದಿಷ್ಟವಾಗಿ ಇಂಥದೇ ದಿನ ಪಾವತಿ ಮಾಡುವುದಾಗಿ ನಾವು ಹೇಳಿರಲಿಲ್ಲ ಎಂದು ತಿಳಿಸಿದರು.