27.1 C
Udupi
Wednesday, September 3, 2025
spot_img
spot_img
HomeBlogಗಣೇಶೋತ್ಸವ ಮೂಲಕ ನಡೆಯುವ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನಿಮ್ಮ ಸಹಕಾರವಿರಲಿ

ಗಣೇಶೋತ್ಸವ ಮೂಲಕ ನಡೆಯುವ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನಿಮ್ಮ ಸಹಕಾರವಿರಲಿ

ನೋಡ ಬನ್ನಿ, ಕಾರ್ಕಳ “ಬಸ್ ಸ್ಟ್ಯಾಂಡ್ ಗಣಪ”

ಗುಡಿಯಲ್ಲಿದ್ದ ಗಣಪನನ್ನು ಸಾರ್ವಜನಿಕವಾಗಿ ಪೂಜಿಸುವ ಕಲ್ಪನೆ ಹುಟ್ಟಿಕೊಂಡಿದ್ದರ ಹಿಂದೆ ಮಹಾನ್ ಕ್ರಾಂತಿಯ ಚಿಂತನೆಯಿದೆ. ಬ್ರಿಟೀಷ್ ಭಾರತದಲ್ಲಿ ಭಾರತೀಯರನ್ನು ಜಾತಿ ಮತ ಧರ್ಮಗಳ ಭೇದಭಾವ ಇಲ್ಲದೆ ಒಗ್ಗೂಡಿಸುವ ಚಿಂತನೆಯಿಂದ ಬಾಲಗಂಗಾಧರ ತಿಲಕರು ಆಚರಣೆಗೆ ತಂದ ಸಾರ್ವಜನಿಕ ಗಣೇಶೋತ್ಸವವು ಇಂದು ಸರ್ವ ವ್ಯಾಪಿಯಾಗಿದೆ.

ಯಾವ ಆಶಯದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಕಲ್ಪನೆಯನ್ನು ಕೊಟ್ಟರೋ ತಿಲಕರ ಆಶಯಕ್ಕೆ ಎಳ್ಳಷ್ಟೂ ಚ್ಯುತಿ ಬರದಂತೆ ಸರ್ವ ಜನಾಂಗವನ್ನೂ ಒಳಗೊಂಡ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಕ್ಷಿಯೇ ನಮ್ಮ ಕಾರ್ಕಳದ “ಬಸ್ಟ್ಯಾಂಡ್ ಗಣೇಶೋತ್ಸವ”.

ಕಾರ್ಕಳ ತಾಲೂಕಿನ ಕೇಂದ್ರ ಬಿಂದುವಾಗಿರುವ, ಜಿಲ್ಲೆಯ ನಾನಾ ಭಾಗಗಳಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಕಾರ್ಕಳ ಬಸ್ ಸ್ಟ್ಯಾಂಡಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲರನ್ನೂ ಎದುರುಗೊಳ್ಳಲಿದ್ದಾನೆ ನಮ್ಮ ಪ್ರೀತಿಯ “ಬಸ್ಟ್ಯಾಂಡ್ ಗಣಪ”.

ಕಳೆದ 18 ವರ್ಷಗಳಿಂದ ಎಲ್ಲಾ ಧರ್ಮ, ಜಾತಿ, ವರ್ಗದ ಜನರಿಂದ ಶೃಧ್ದೆ ಮತ್ತು ಭಕ್ತಿಯಿಂದ ಪೂಜಿಸಲ್ಪಟು, ತನ್ನ‌ ಮೇಲೆ ನಂಬಿಕೆ ಇಟ್ಟು ಹರಕೆ ಹೊತ್ತ ಭಕ್ತರನ್ನು ಹರಸಿ, ಭಕ್ತರು ಸಮರ್ಪಿಸಿದ ಕಾಣಿಕೆಯನ್ನು ತನ್ನೊಳಗೆ ಇರಿಸದೆ ಸಂಕಷ್ಟದಲ್ಲಿರುವ ಭಕ್ತರಿಗೆ ಧನ ಸಹಾಯದ ರೂಪದಲ್ಲಿ ನೀಡಿ ಅವರ ಕಷ್ಟಕ್ಕೆ ನೆರವಾಗಿ ಸಂಕಷ್ಟಹರ ಗಣಪ ಎಂದು ತನಗಿರುವ ಬಿರುದಿನಂತೆ ಭಕ್ತರ ಸಂಕಷ್ಟವನ್ನು ದೂರಗೊಳಿಸುತ್ತಲಿದ್ದಾನೆ ನಮ್ಮ ಬಸ್ಟ್ಯಾಂಡ್ ಗಣಪ.

ತನ್ನನ್ನು ನಂಬಿದ ಭಕ್ತರು ಪರಸ್ಪರ ಪ್ರೀತಿ ನಂಬಿಕೆಯಿಂದ ಬಾಳಿ ಬದುಕುವಂತೆ ಕಾಪಾಡುವ ಬಸ್ ಸ್ಟ್ಯಾಂಡ್ ಗಣೇಶ ಮತ್ತೊಮ್ಮೆ ನಮಗೆ ದರ್ಶನ ನೀಡಲು ಇದೇ ಅಗಸ್ಟ್ ತಿಂಗಳ 27 ನೆ ತಾರೀಖಿನಂದು ಕಾರ್ಕಳ ಬಸ್ ಸ್ಟ್ಯಾಂಡ್ ನಲ್ಲಿ 18ನೇ ಬಾರಿಗೆ ನಮ್ಮೆಲ್ಲರನ್ನು ಹರಸಲು ಬರುತ್ತಿದ್ದಾನೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಿ. ಬಸ್ಟಾಂಡ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page