
ಇತ್ತೀಚಿನ ದಿನಗಳಲ್ಲಿ ಹೃದಯಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಇದೀಗ ಹೃದಯಾಘಾತದ ಮುನ್ಸೂಚನೆಯ ಬಗ್ಗೆ ಮಾಹಿತಿ ಕೊಟ್ಟಿರುವ ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್ ಅವರು, ಹೃದಯಾಘಾತದ ಮುನ್ಸೂಚನೆ ಕೇವಲ ಎದೆ ನೋವು, ಎದೆಯುರಿ ಮಾತ್ರವಲ್ಲದೇ ದವಡೆ, ಗಂಟಲು ನೋವುಗಳೂ ಅದಕ್ಕೆ ಕಾರಣವಾಗಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಪಾಲಿಟಿಕಲ್ ಟಿವಿ ಕನ್ನಡ ಇನ್ಸ್ಟಾಗ್ರಾಮ್ನಲ್ಲಿ ಡಾ.ಮಂಜುನಾಥ್ ಅವರ ಈ ಸಂದರ್ಶವನ್ನು ಶೇರ್ ಮಾಡಲಾಗಿದ್ದು ಅದರಲ್ಲಿ ವೈದ್ಯರು ಹೇಳಿದ್ದೇನೆಂದರೆ, ‘ಹೃದಯ ಮತ್ತು ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಖರವಾಗಿರುತ್ತವೆ. ನಡೆದಾಗ, ಓಡಾಡಿದಾಗ ಎದೆ ನೋವು ಇದ್ದರೆ ಇಲ್ಲವೇ ಎದೆ ಉರಿ ಇದ್ದರೆ ಅದರಲ್ಲಿಯೂ ಊಟ ಮಾಡಿದ ಬಳಿಕ ಏರು ಸ್ಥಳದಲ್ಲಿ ನಡೆಯುವಾಗ ನಿಮಗೆ ಏನಾದ್ರೂ ಎದೆನೋವು, ಎದೆ ಉರಿ, ಗಂಟಲು ನೋವು ಅಥವಾ ದವಡೆ ನೋವು… ಈ ರೀತಿ ಸಮಸ್ಯೆ ಕಾಣಿಸಿಕೊಂಡರೆ ಅದು ಹೃದಯಕ್ಕೆ ಸಂಬಂಧಪಟ್ಟಿದ್ದಾಗಿದ್ದು, ಅದು ಹೃದಯಾಘಾತದ ಮುನ್ಸೂಚನೆ ಆಗಿರುತ್ತದೆ’ ಎಂದಿದ್ದಾರೆ.
35 ವರ್ಷ ಆದ ಪುರುಷರು, 45 ವರ್ಷ ಆದ ಮಹಿಳೆಯರು ವಾರ್ಷಿಕವಾಗಿ ಸಿಂಪಲ್ ಒಂದು ಟೆಸ್ಟ್ ಮಾಡಿಸಿಕೊಳ್ಳಿ. ಬಿಪಿ, ಶುಗರ್, ಕೊಲೆಸ್ಟ್ರಾಲ್ ಚೆಕ್ ಮಾಡಿಸಿಕೊಳ್ಳಿ. ಥ್ರೆಡ್ಮಿಲ್ ಇಸಿಜಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.