ಶೃಂಗೇರಿ ಶ್ರೀ ಶಾರದಾಂಬೆಯ ಮತ್ತು ಗುರುಮಠದ ಸ್ವಾಮೀಜಿಯ ಗುರುವಂದನಾ ಕಾರ್ಯಕ್ರಮ

ಶೃಂಗೇರಿ ಶ್ರೀ ಶಾರದಾಂಬೆಯ ಮತ್ತು ಮಠದ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮವು ಕ್ಷತ್ರಿಯ ಮರಾಠ/ಆರ್ಯ ಮರಾಠ ಸಮಾಜದ ಕಾರ್ಕಳ, ಕಾಸರಗೋಡು, ಮಂಗಳೂರು, ಸುಳ್ಯ, ಮುಲ್ಕಿ, ಮೂಡಬಿದ್ರಿ, ಉಡುಪಿ,ಸಿದ್ದಾಪುರ,ತೀರ್ಥಹಳ್ಳಿ,ಕೊಪ್ಪ, ಬಂಧುಗಳಿಂದ ಗುರುವಂದನೆಯು ಜರುಗಿತು. ಐದು ಜಿಲ್ಲೆಗಳ ಸಮಾಜದ ಬಂಧುಗಳು ಒಂದೆಡೆ ಸೇರಿ ಮಠಾಧೀಶರ ದರ್ಶನ ಪಡೆದು ಶ್ರೀಗಳು ಕ್ಷತ್ರಿಯ ಸಮಾಜದ ಬಂಧುಗಳು ಮಕ್ಕಳ ವಿದ್ಯಾಭ್ಯಾಸಕ್ಕೆ, ಉದ್ಯೋಗ,ಸಮಾಜಮುಖಿ ಕೆಲಸ ಕಾರ್ಯಗಳು ಸಮಾಜದಿಂದ ನಿತ್ಯ ನಿರಂತರ ಮಾಡುವಂತೆ ಆಗಬೇಕೆಂದು ಕಿವಿ ಮಾತನ್ನು ಹೇಳಿ ಪ್ರವಚನವನ್ನು ನೀಡಿ ಮಂತ್ರಾಕ್ಷತೆ ನೀಡಿದರು.
