
ಕಾರ್ಕಳ: ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ನವರು ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಛಾಂಪಿಯನ್‌ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಕಾರ್ಕಳ ಕ್ರೈಸ್ಟ್ ಕಿಂಗ್ ,ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾಳೆ. ರಾಷ್ಟçಮಟ್ಟದ ಪಂದ್ಯಾಟವು ಇದೇ 16 ರಿಂದ 21 ರವರೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ
ಪಿಲಾನಿಯಲ್ಲಿ ನಡೆಯಲಿದ್ದು ಇಲ್ಲಿ ವರುಣ ಶೆಟ್ಟಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ಜೋಡುರಸ್ತೆಯ ಕೊರಚೊಟ್ಟುವಿನ ಪ್ರಭಾಕರ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಶೆಟ್ಟಿ
ದಂಪತಿಗಳ ಪುತ್ರಿಯಾಗಿದ್ದಾಳೆ.





