616 ಅಂಕಗಳನ್ನು ಪಡೆದ ದಿಶಾ ಹೆಚ್ ಶೆಟ್ಟಿ ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕ್

ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ
ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ
ಹತ್ತನೇ ತರಗತಿಯ ವಿದ್ಯಾರ್ಥಿ ಅಕ್ಷಿತ್ ವಿ ಹೆಗ್ಡೆ 625 ಕ್ಕೆ 620
ಅಂಕಗಳನ್ನು ಪಡೆದು ರಾಜ್ಯಕ್ಕೆ ಆರನೇ ರ‍್ಯಾಂಕ್
ಪಡೆದುಕೊಂಡಿದ್ದಾನೆ. ಈತ ಕಾಬೆಟ್ಟು ನಿವಾಸಿ ಶ್ರೀ ವಸಂತ ಹೆಗ್ಡೆ
ಹಾಗೂ ಶ್ರೀಮತಿ ಸವಿತಾ ವಿ ಹೆಗ್ಡೆ ದಂಪತಿಗಳ ಪುತ್ರನಾಗಿದ್ದಾನೆ.
ಜೊತೆಗೆ ಇದೇ ಸಂಸ್ಥೆಯ ದಿಶಾ ಹೆಚ್ ಶೆಟ್ಟಿ 616 ಅಂಕಗಳನ್ನು
ಪಡೆದುಕೊಂಡು ರಾಜ್ಯಕ್ಕೆ ಹತ್ತನೇ ರ‍್ಯಾಂಕ್‌ಗಳನ್ನು
ಪಡೆದುಕೊಂಡಿದ್ದಾಳೆ. ಈಕೆ ಬೆಳುವಾಯಿಯ ಹರೀಶ್ ಎಸ್ ಶೆಟ್ಟಿ
ಹಾಗೂ ಶ್ರೀಮತಿ ಶ್ರೀದೇವಿ ಯು ಶೆಟ್ಟಿ ದಂಪತಿಗಳ
ಪುತ್ರಿಯಾಗಿದ್ದಾಳೆ. ಸಾಧಕರನ್ನು ಸಂಸ್ಥೆಯ ಆಡಳಿತ
ಮಂಡಳಿಯವರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು
ಅಭಿನಂದಿಸಿದ್ದಾರೆ.