20.7 C
Udupi
Monday, December 22, 2025
spot_img
spot_img
HomeBlogಕ್ರೈಸ್ಟ್ ಕಿಂಗ್: ವಿಶ್ವ ಪರಿಸರ ದಿನಾಚರಣೆ

ಕ್ರೈಸ್ಟ್ ಕಿಂಗ್: ವಿಶ್ವ ಪರಿಸರ ದಿನಾಚರಣೆ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರಣದಲ್ಲಿ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಮೂಡಬಿದ್ರೆ ಉಪವಿಭಾಗ ಹಾಗೂ ಕಾರ್ಕಳ ವಲಯದ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ತಹಶೀಲ್ಡಾರ್ ಪ್ರದೀಪ್ಅವರು ಆಗಮಿಸಿದ್ದರು. ಅವರು ಮಾತನಾಡಿ “ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿ ತಮ್ಮ ಮನೆಗಳಲ್ಲಿ
ಗಿಡಗಳನ್ನು ನೆಟ್ಟು ಬೆಳಸಬೇಕು” ಎಂದು ಹೇಳಿದರು.

ಮತ್ತೋರ್ವ ಅತಿಥಿ, ನಿಟ್ಟೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾದ ಆನಂದ್ ಎಸ್ ವಾರ್ತಿ ಮಾತನಾಡಿ “ಪರಿಸರವಿದ್ದರೆ ಮಾಥ್ರ ನಾವಿರಲು ಸಾಧ್ಯ, ಆದ್ದರಿಂದ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿಯವರಾದ ಹುಕ್ರಪ್ಪ ಗೌಡ ಇನ್ನಿತರ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ತದನಂತರ ವಿದ್ಯಾರ್ಥಿಗಳು ಕ್ರಿಸ್ತ ಸೇವಕಿ ಆಶ್ರಮ ಪರ್ಪಲೆ ಇಲ್ಲಿಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು ಇಲ್ಲಿಯ ಧರ್ಮಗುರುಗಳಾದ ರೆವರೆಂಡ್ ಫಾದರ್ ಬುಖಾರ್ಟ್ ಬರ್ಟಿ ಅಮನ್ನಾ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಬಾಳಿ
ಎಂದು ಶುಭ ಹಾರೈಸಿದರು. ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾರವರು ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ದಳ ಹಾಗೂ ವಿಜ್ಞಾನ ಸಂಘದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ರೀತಿಯ ಗಿಡಗಳನ್ನು ನೆಟ್ಟರು. ಸ್ಕೌಟ್ಸ್ ಮತ್ತು ಗೈಡ್ ಶಿಕ್ಷಕರಾದ ಪ್ರಕಾಶ್ ನಾಯ್ಕ್, ಕೃಷ್ಣ ಪ್ರಸಾದ್, ಆಶಾಜ್ಯೋತಿ, ಜಯಲಕ್ಷ್ಮೀ ಕಾರ್ಯಕ್ರಮ ಸಂಘಟಿಸಿದ್ದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page