
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳು, ಕಾರ್ಕಳ ಇವರ ಜಂಟಿ ಸಹಯೋಗದಲ್ಲಿ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಭಾವಗೀತೆ ಗಾಯನ ಸ್ಪರ್ಧೆ ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಅಕ್ಷರ್ ಕುಮಾರ್ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
. ಉಳಿದಂತೆ ಸಂಸ್ಕೃತ ಧಾರ್ಮಿಕ ಪಠಣದಲ್ಲಿ 9ನೇ ತರಗತಿಯ ಕೆ.ಸ್ತುತಿ ಪುರಾಣಿಕ್ ದ್ವಿತೀಯ ಸ್ಥಾನ, ಅರೇಬಿಕ್ ಧಾರ್ಮಿಕ ಪಠಣದಲ್ಲಿ 9ನೇ ತರಗತಿಯ ಮಹಮ್ಮದ್ ಇಶಾನ್ ಅಕ್ಬರ್ ದ್ವಿತೀಯ ಸ್ಥಾನ, ಕವ್ವಾಲಿಯಲ್ಲಿ ಹತ್ತನೇ ತರಗತಿಯ ರೇಚಲ್ ಡಿಸೋಜ,ಝುಬೇದ, ಅಚ್ಚು ವಿದ್ಯೋಪರಾಜ್ ಗುರುಕುಲಂ, 9ನೇ
ತರಗತಿಯ ಅನಘ ವಿ ಪೂಜಾರಿ, ಮಹಮ್ಮದ್ ಇಶಾನ್ ಅಕ್ಬರ್,ಅಕ್ಷರ್ ಕುಮಾರ್ ದ್ವಿತೀಯ ಸ್ಥಾನ, ಕನ್ನಡ ಭಾಷಣದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಬ್ರೋವಿನ್ ಅಗೇರಾ ಹಾಗೂ ಇಂಗ್ಲೀಷ್ ಭಾಷಣ ಪ್ರಥಮ ವಾಣಿಜ್ಯ ವಿಭಾಗದ ಕರ‍್ತನ್ ಡಿಸೋಜ ದ್ವಿತೀಯಸ್ಥಾನ ಪಡೆದುಕೊಂಡಿದ್ದಾರೆ.





