
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಸಹಯೋಗದಲ್ಲಿ
ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಇಲ್ಲಿ ನಡೆದ ಕಾರ್ಕಳ
ತಾಲೂಕು ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ
ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪೌಢಶಾಲೆಯ
ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ
ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಒಂಬತ್ತನೇ ತರಗತಿಯ ಶೈನಿ
ಡಿಸೋಜಾ, ಶಗುನ್ ವರ್ಮಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ
ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ ಸಾನ್ವಿ
ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ಶಗುನ್
ವರ್ಮಾ ಬೆಸ್ಟ್ ಅಟ್ಯಾಕರ್ ಮತ್ತು ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ
ಪಡೆದುಕೊಂಡರು.