
ನವದೆಹಲಿ: ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಫೈನಲ್ ತಲುಪಿದರೂ ನಿಗದಿತ ತೂಕದ ಮಿತಿಗಿಂತ 100 ಗ್ರಾಂ ಹೆಚ್ಚು ಇದ್ದ ಕಾರಣ ಪದಕ ನಿರಾಕರಿಸಲ್ಪಟ್ಟ ಕುಸ್ತಿಪಟು ವಿನೇಶ್ ಪೋಗಟ್ ಅವರು ವೃತ್ತಿಪರ ಕುಸ್ತಿಯಿಂದ ದೂರ ಸರಿದಿದ್ದರು. ಇದೀಗ ಡಿ. 12ರಂದು ವಿನೇಶ್ ಪೋಗಟ್ ತಮ್ಮ ಒಲಂಪಿಕ್ ಪದಕ ಗೆಲ್ಲುವ ಕನಸನ್ನು ಬೆನ್ನಟ್ಟಲು ವೃತ್ತಿಪರ ಕುಸ್ತಿಯ ನಿವೃತ್ತಿಯಿಂದ ಹೊರ ಬಂದಿರುವುದಾಗಿ ದೃಢಪಡಿಸಿದ್ದಾರೆ.
ಈ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿನೇಶ್ ಪೋಗಟ್ ‘ಪ್ಯಾರಿಸ್ ಅಂತ್ಯವೇ ಎಂದು ಜನರು ಕೇಳುತ್ತಲೇ ಇದ್ದರು. ಬಹಳ ಸಮಯದಿಂದ ನನ್ನ ಬಳಿ ಉತ್ತರವಿರಲಿಲ್ಲ. ಒತ್ತಡದಿಂದ, ನಿರೀಕ್ಷೆಗಳಿಂದ, ನನ್ನ ಸ್ವಂತ ಮಹತ್ವಕಾಂಕ್ಷೆಗಳಿಂದಲೂ ದೂರ ಸರಿಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿಗೆ ನಾನು ಉಸಿರಾಡಲು ಅವಕಾಶ ಮಾಡಿಕೊಟ್ಟೆ. ನನ್ನ ಪ್ರಯಾಣದ ಭಾರವನ್ನು ಅರ್ಥ ಮಾಡಿಕೊಳ್ಳಲು ನಾನು ಸಮಯ ತೆಗೆದುಕೊಂಡೆ- ಉತ್ತುಂಗಗಳು, ಆಘಾತಗಳು, ತ್ಯಾಗಗಳು ಜಗತ್ತು ಎಂದಿಗೂ ನೋಡಿರದ ನನ್ನ ಆವೃತ್ತಿಗಳು…. ಮತ್ತು ಆ ಪ್ರತಿಬಿಂಬದಲ್ಲಿ ಎಲ್ಲೋ, ನಾನು ಸತ್ಯವನ್ನು ಕಂಡುಕೊಂಡೆ, ನಾನು ಇನ್ನೂ ಈ ಕ್ರೀಡೆಯನ್ನು ಪ್ರೀತಿಸುತ್ತೇನೆ, ಇನ್ನೂ ಸ್ಪರ್ಧಿಸಲು ಬಯಸುತ್ತೇನೆ’ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದು ಹಂಚಿಕೊಂಡಿದ್ದಾರೆ.





