
ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ
ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ
ಮೂಡಿಬರುತ್ತದೆ ಅದೇ “ಡಿಟೆಕ್ಟಿವ್ ದಿವಾಕರ್”
ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ದಿನಾಂಕ: 28- 03- 2026 ಶನಿವಾರ ನೆರವೇರಿತು.
ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು
ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ
ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಶ್ರೀ ಅಶ್ವತ್ ಎಸ್.ಎಲ್ .ರವರು “ಈ ಚಲನಚಿತ್ರವು
ಒಂದು ಹೊಸ ಕಥಾಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ,
ರಹಸ್ಯಗಳನ್ನು ಅನಾವರಣಗೊಳಿಸುವ ಈ ಕಥೆ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದೆ”. ಎಂದು ತಿಳಿಸುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ರವೀಂದ್ರ ಶೆಟ್ಟಿ ಬಜಗೋಳಿ, ಕ್ರಿಯೇಟಿವ್ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್ .ಎಲ್.,
ಅಮೃತ್ ಯು .ರೈ, ಎನ್.ಪಿ . ಮೀಡಿಯಾದ ಮುಖ್ಯಸ್ಥರಾದ ವಾಸುದೇವ ಭಟ್, ಸಂದೀಪ್ ಎನ್, ಅವಿನಾಶ್ ಶೆಟ್ಟಿ (ಅಮ್ಮ
ಚಾರಿಟೇಬಲ್ ಟ್ರಸ್ಟ್), ರಮಾನಂದ (ನಿರ್ದೇಶಕರು) ಡಾ. ಸಂತೋಷ್ ಕುಮಾರ್ ಶೆಟ್ಟಿ, ಸುನೀಲ್ ಕಡ್ತಲ, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಲೋಹಿತ್ ನಡೆಸಿಕೊಟ್ಟರು.ಚಿತ್ರತಂಡದ ಪರಿಚಯ
ನಿರ್ಮಾಪಕರು : ಶ್ರೀ ಅಮೃತ್ ಯು. ರೈ. ಮತ್ತು ಸುನೀಲ್ ಶೆಟ್ಟಿ
ಸಹ ನಿರ್ಮಾಣ : ವಿಭಾ ಪ್ರೊಡಕ್ಷನ್
ಕಥೆ ಮತ್ತು ನಿರ್ದೇಶನ : ಸುನೀಲ್ ಕಡ್ತಲ
ಸಹಾಯಕ ನಿರ್ದೇಶಕರು: ವಿನೀಷ ಪೂಜಾರಿ, ಸಾಯಿನಾಥ್ ಪೆರ್ಡೂರು
ಛಾಯಾಗ್ರಹಣ : ಸಂತೋಷ್ ಕುಲಾಲ್
ಸಂಗೀತ : ಕಾರ್ತಿಕ್ ಮುಲ್ಕಿ, ಪ್ರವೀಣ್
ಸಂಕಲನ : ಗಗನ್ ಡಿ, ಪ್ರವೀಣ್ ಜಾರ್ಕಳ, ಪ್ರಜ್ವಲ್ ಸುವರ್ಣ
ವಸ್ತ್ರಲಂಕಾರ : ದರ್ಶಿತ್ ಭಂಡಾರಿ
ಪಬ್ಲಿಸಿಟಿ ಡಿಸೈನ್ : ಇನ್ಸ್ಪೈರ್ ಕ್ರಿಯೇಶನ್.























































