
ನವದೆಹಲಿ : ಕೇಂದ್ರ ಸರ್ಕಾರವು ಕೊಬ್ಬರಿ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು 2 ಸ್ತರದಲ್ಲಿ ಹೆಚ್ಚಳ ಮಾಡಿದ್ದು ಈ ಕ್ರಮದಿಂದ ಕರ್ನಾಟಕ ಸೇರಿ ದೇಶದ ಎಲ್ಲಾ ಕೊಬ್ಬರಿ ಬೆಳೆಗಾರರಿಗೆ ಲಾಭವಾಗಲಿದೆ.
ಹೋಳು ಕೊಬ್ಬರಿಯ ಎಂಎಸ್‌ಪಿಯಲ್ಲಿ 445 ರು. ಏರಿಕೆ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 12,027 ರು. ನಿಗದಿಪಡಿಸಲಾಗಿದೆ. ಉಂಡೆ ಕೊಬ್ಬರಿಗೆ ನೀಡಲಾಗುವ ಬೆಂಬಲ ಬೆಲೆಯಲ್ಲಿ 400 ರು. ಹೆಚ್ಚಿಸಿ 12,500 ರು. ಮಾಡಲಾಗಿದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ಇದೇ ಬೆಲೆಯನ್ನು ಅನುಸರಿಸಲಿವೆ. ಈ ಕ್ರಮದಿಂದ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಹಾಗೆ ಕೊಬ್ಬರಿ ಉತ್ಪಾದನೆಯನ್ನು ವೃದ್ಧಿಸಲು ಬೆಳೆಗಾರರಿಗೆ ಸಹಾಯವಾಗಲಿದೆ. ಪ್ರಸ್ತುತ ಹೋಳು ಕೊಬ್ಬರಿಗೆ ಕ್ವಿಂಟಲ್‌ಗೆ 11582 ರು. ಮತ್ತು ಉಂಡೆ ಕೊಬ್ಬರಿಗೆ 12100 ರು. ಬೆಂಬಲ ಬೆಲೆ ನೀಡಲಾಗುತ್ತಿದೆ.





