
ಮುಂಬೈ: ಡಿಸಿಎಂ ಡಿ.ಕೆ ಶಿವಕುಮಾರ್ ಕುರ್ಚಿ ಕದನದ ನಡುವೆ ಮಹರಾಷ್ಟ್ರದ ಶಿರಡಿ ಸಾಯಿಬಾಬಾನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನದ ಬಳಿಕ ಹೈಕಮಾಂಡ್ ತುರ್ತು ಕರೆ ನೀಡಿದ್ದರಿಂದ, ಅಲ್ಲಿಂದಲೇ ದೆಹಲಿಗೆ ತೆರಳಿದ ಡಿಕೆಶಿ ಸಾಯಿಬಾಬಾನ ದರ್ಶನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಪ್ರಯತ್ನ ವಿಫಲ ಆದ್ರೂ, ಪ್ರಾರ್ಥನೆ ಫಲ ನೀಡಲಿದೆ ಎಂದು ಬರೆದು ಹಂಚಿಕೊಂಡಿದ್ದಾರೆ.