ಕಾಂಗ್ರೆಸ್ ನಾಯಕ ಉದಯಶೆಟ್ಟಿ ಮುನಿಯಾಲು ಕಂಬನಿ

ಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು, ಕುಕ್ಕುಂದೂರಿನ ಪ್ರತಿಷ್ಠಿತ ಗುಡ್ಡೆಗುತ್ತು ಮನೆತನದ ಹಿರಿಯರಾದ ಕೆ. ರತ್ನರಾಜ ಮುದ್ಯ ಅವರ ಅಗಲುವಿಕೆಗೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಕಂಬನಿ ಮಿಡಿದಿದ್ದಾರೆ.
ಸರಳ ಸಜ್ಜನ ವ್ಯಕ್ತಿತ್ವದ ಹಿರಿಯರು, ನನ್ನೆಲ್ಲಾ ಕೆಲಸ ಕಾರ್ಯಗಳಿಗೆ ಮಾರ್ಗದರ್ಶಕರಾಗಿ ಆಶೀರ್ವದಿಸುತ್ತಿದ್ದ ಹಿರಿಯರ ಅಗಲುವಿಕೆಯಿಂದ ಮನಸ್ಸಿಗೆ ಬಹಳ ನೋವಾಗಿದೆ, ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಜನಾನುರಾಗಿಯಾಗಿದ್ದು ಅಪಾರ ಧಾರ್ಮಿಕ ಶ್ರದ್ದೆಯುಳ್ಳ ವ್ಯಕ್ತಿಯಾಗಿದ್ದ ಕೆ. ರತ್ನರಾಜ ಮುದ್ಯರವರ ಅಗಲುವಿಕೆಯು ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಶ್ರೀಯುತರ ಆತ್ಮಕ್ಕೆ ಚಿರಶಾಂತಿಯು ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸುವಂತಾಗಲಿ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಸಂತಾಪ ಪತ್ರದಲ್ಲಿ ತಿಳಿಸಿದ್ದಾರೆ.



















































