
ಕುಕ್ಕುಂದೂರು ಫ್ರೆಂಡ್ಸ್ (ರಿ) ಕುಕ್ಕುಂದೂರು – ಮುಂಬೈ ವತಿಯಿಂದ “2024ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ” ಪುರಸ್ಕಾರ ಪಡೆದ ಎಎನ್ಎಫ್ (ನಕ್ಸಲ್ ನಿಗ್ರಹ ಪಡೆ)ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಇಂದು ದಿನಾಂಕ 18-05-2024 ರಂದು ಕುಕ್ಕುಂದೂರು ಮುಗೇರ ಕ್ರೀಡಾಂಗಣದಲ್ಲಿ ನಡೆಯಿತು.
ನಕ್ಸಲ್ ನಿಗ್ರಹ ಪಡೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ಇಲಾಖೆಯಿಂದ ಗುರುತಿಸಲ್ಪಟ್ಟು “2024ನೇ ಸಾಲಿನ ಮುಖ್ಯಮಂತ್ರಿಯವರ ಚಿನ್ನದ ಪದಕ” ಪುರಸ್ಕಾರ ಪಡೆದ ಶ್ರೀ ಬಸವರಾಜ್ ಬಿರಾಜ್ಪೊಲೀಸ್ ಸಬ್ ಇನ್ಸ್ಪೆಕ್ಟರ್ (RSI), ಶ್ರೀ ಅಭಿಮಾನ್ ಬೋವಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ (RSI), ಶ್ರೀ ವಿಶಾಲ್ ಹೊಸಮನಿ .ಪೊಲೀಸ್ ಹೆಡ್ ಕಾನ್ಸ್ಟೇಬಲ್ (HC), ಶ್ರೀ ಸೋಮಲಿಂಗ ಹೂಲಿಪೊಲೀಸ್ ಕಾನ್ಸ್ಟೇಬಲ್ (CPC), ಶ್ರೀ ಮಂಜುನಾಥ್ ಹಳಬನವರಪೊಲೀಸ್ ಕಾನ್ಸ್ಟೇಬಲ್ (CPC) ಅವರನ್ನು ಸನ್ಮಾನಿಸಲಾಯಿತು.

ಕುಕ್ಕುಂದೂರು ಫ್ರೆಂಡ್ಸ್ ಗೌರವಾಧ್ಯಕ್ಷರಾದ ಶ್ರೀ ತ್ರಿವಿಕ್ರಮ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಅನೀಲ್ ಪೂಜಾರಿ, ಅಮ್ಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅವಿನಾಶ್ ಜಿ. ಶೆಟ್ಟಿ, ಸ್ಥಳೀಯರಾದ ಸುಂದರ, ಜಯಂತಿ ಶೆಟ್ಟಿ, ಹರೀಶ್ ಶೆಟ್ಟಿ, ಗಣೇಶ್ ನಾಯಕ್, ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀ ನಿವಾಸ ಕಿಣಿ, ಮುಗೇರಕಲ ಪ್ರೀಮಿಯರ್ ಲೀಗ್ ನ ಪ್ರಕಾಶ್ ಅಚಾರ್ಯ ಉಪಸ್ಥಿತರಿದ್ದರು.ಗಣೇಶ್ ಪೈ ಪ್ರಾರ್ಥಿಸಿದರು. ಪ್ರಸನ್ನ ಕುಕ್ಕುಂದೂರು ಕಾರ್ಯಕ್ರಮ ನಿರೂಪಿಸಿದರು.








