ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಯಜ್ಞ

ಫೆ.9 ರ ರವಿವಾರ ಮುಂಜಾನೆ 5-30ರಿಂದ ಕುಂದಾಪುರದ ಶ್ರೀ ಪತಂಜಲಿ ಯೋಗ ಸಮಿತಿ ಮತ್ತು ಕುಂದಾಪುರ ತಾಲೂಕು ಕ್ರೀಡಾ ಭಾರತಿ ಇವರು ಜಂಟಿಯಾಗಿ ರಥ ಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಯಜ್ಞವನ್ನು ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿಸಿದರು. ಇದರಲ್ಲಿ 58 ಯೋಗ ಬಂಧುಗಳು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.
ಇದೇ ಸಮಯದಲ್ಲಿ ವಿಪ್ರರಾದ ವಿದ್ವಾನ್ ಚಂದ್ರಶೇಖರ ಅಡಿಗರು ಆದಿತ್ಯ ಹೃದಯ ಮಹಾ ಯಜ್ಞವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ಕೊಟ್ಟರು.
ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ಮಂಜುನಾಥ ಶೆಟ್ಟಿ, ಶ್ರೀ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರು ವಿವೇಕ್ ಪೈ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಂಕರ್ ಶೆಟ್ಟಿ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಸತತ 18 ವರ್ಷಗಳಿಂದ ಯೋಗಾರ್ಥಿಗಳಾಗಿ ಭಾಗವಹಿಸಿ ಪ್ರೋತ್ಸಾಹಿಸಿದ ಹಿರಿಯರನ್ನು ಗೌರವಿಸಲಾಯಿತು. ವಿಭಾಗ ಸಂಯೋಜಕರಾದ ಪ್ರಸನ್ನ ಶೆಣೈ,
ಉಡುಪಿ ಜಿಲ್ಲಾ ಕ್ರೀಡಾ ಭಾರತಿಯ ಕಾರ್ಯದರ್ಶಿ ಶ್ರೀ ಲಿಂಗಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹೆಚ್ ಕೆ ಗಣಪ್ಪಯ್ಯ ಹಾಗೂ ಪ್ರಕಾಶ್ ದಂಬೆ ಉಪಸ್ಥಿತರಿದ್ದರು.
ರಾಮದಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು,
ವಂದನಾರ್ಪಣೆ ಯನ್ನು ದಿನೇಶ್ ಸಾರಂಗ ಇವರು ನಡೆಯಿಸಿ ಕೊಟ್ಟರು.
