
ಕಾರ್ಕಳ: ದಿನಾಂಕ 10.08.2025 ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಕಾರ್ಕಳ ಹೆಬ್ರಿ ತಾಲೂಕ ಮಟ್ಟದ ಬಂಟರ ಸಂಘದ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ಕೆಸರ್ದ ಕೂಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ತಾಲೂಕು ಸಂಚಾಲಕರಾದ ವಿಜಯ ಶೆಟ್ಟಿ ಇವರ ನೇತೃತ್ವದಲ್ಲಿ ಮಹಿಳಾ ಘಟಕದ ಅಧ್ಯಕ್ಷ ಪೂರ್ಣಿಮಾ ಹೆಗ್ಡೆ. ಯುವ ಬಂಟರ ಸಂಘದ ಅಧ್ಯಕ್ಷ ಅವಿನಾಶ್ ಶೆಟ್ಟಿ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜುಲೈ.1ರಂದು ಬಿಡುಗಡೆಗೊಳಿಸಲಾಯಿತು.