ಶ್ರೀಕಾಂತ್ ಶೆಟ್ಟಿ, ರಮೇಶ್ ತೆಳ್ಳಾರು ಜಾಮೀನು ಮಂಜೂರು
ಕಾರ್ಕಳ : ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮೊದಲು ಪ್ರಾಶಸ್ಯ ನೀಡಬೇಕು ಎಂದು ಹೇಳಿ ಪೊಲೀಸರಿಂದ ಸೋಮೋಟೋ ಕೇಸ್ ದಾಖಲಿಸಿಕೊಂಡಿದ್ದ ರಮೇಶ್ ತೆಳ್ಳಾರು ಹಾಗೂ ಸೋಮೋಟೋ ಕೇಸ್ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತಸ್ತರದ ಮುಖಂಡ ಶ್ರೀಕಾಂತ್ ಶೆಟ್ಟಿ ಅವರಿಗೆ ಡಿ. 10ರಂದು ಜಾಮೀನು ಮಂಜೂರಾಗಿದೆ.
ಶ್ರಿಕಾಂತ್ ಶೆಟ್ಟಿ ಹಾಗೂ ರಮೇಶ್ ತೆಳ್ಳಾರು ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೋಮೋಟೋ ಕೇಸ್ ದಾಖಲಾಗಿತ್ತು. ಇದೀಗ 26 ದಿನಗಳ ಅನಂತರ ರಮೇಶ್ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ರಮೇಶ್ ಪರವಾಗಿ ಮಣಿರಾಜ್ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿ ಪರವಾಗಿ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.