
ಕಾರ್ಕಳ ತಾಲೂಕು ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆಯು ಕಾರ್ಕಳದ ಸ್ಕೌಟ್ಸ್ ಗೈಡ್ಸ್ ಘಟಕದ ವತಿಯಿಂದ ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಜರುಗಿತು.
ಈ ಗೀತಗಾಯನ ಸ್ಪರ್ಧೆಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ,ಉಡುಪಿ ಜಿಲ್ಲಾ ಗೈಡ್ ಕಮಿಷನರ್ ಹಾಗೂ ಕಾರ್ಕಳ ಸ್ಕೌಟ್ಸ್ ಗೈಡ್ಸ್ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಜೆ ಪೈ, ಶ್ರೀ ಭುವನೇಂದ್ರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎ ಯೋಗೀಶ್ ಹೆಗ್ಡೆ, ಘಟಕದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ,ಘಟಕದ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್, ಸಹಾಯಕ ಜಿಲ್ಲಾ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ ,ಕೋಶಾಧಿಕಾರಿ ಸತೀಶ್ ಶೆಟ್ಟಿ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ,ರಾಜ್ಯ ಸಹ ಸಂಘಟನಾ ಆಯುಕ್ತೆ ಶ್ರೀಮತಿ ಸುಮನ ಶೇಖರ್, ಕಾರ್ಕಳ ಶಿಕ್ಷಣ ವಲಯದ ಇ ಸಿ ಒ ಪ್ರಕಾಶ್, ವಕೀಲ ಸುವೃತ್ ಜೈನ್, ಕಾರ್ಯದರ್ಶಿ ಗಣೇಶ್ ಜಾಲ್ಸೂರು ,ಜೊತೆ ಕಾರ್ಯದರ್ಶಿ ಸೀಮಾ ಕಾಮತ್, ನಿಕಟಪೂರ್ವ ಕಾರ್ಯದರ್ಶಿ ನವೀನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಗಾಯನ ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿನ ಶ್ರೀ ಭುವನೇಂದ್ರ ವಿದ್ಯಾಸಂಸ್ಥೆ ಕಾರ್ಕಳ , ಎಸ್ ವಿ ಟಿ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ , ಜ್ಞಾನಸುಧಾ ಪಿ ಯು ಕಾಲೇಜು ಗಣಿತ ನಗರ ಕಾರ್ಕಳ , ಜೆಸೀಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ, ವರ್ಧಮಾನ ಸ್ಕೂಲ್ ಕಾರ್ಕಳ , ಎಸ್ ಎನ್ ವಿ ಸ್ಕೂಲ್ ಕಾರ್ಕಳ , ಎಸ್ ಎನ್ ,ವಿ ಹೈಸ್ಕೂಲು ಕಾರ್ಕಳ ಮರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆ ಹಿರ್ಗಾನ , ಸೇಕ್ರೇಡ್ ಹಾರ್ಟ್ ಸ್ಕೂಲು ಬಜಗೋಳಿ , ಸರಕಾರಿ ಪ್ರೌಢಶಾಲೆ ಪೆರ್ವಾಜೆ , ಸರಕಾರಿ ಪದವಿ ಪೂರ್ವ ಕಾಲೇಜು
ಸಾಣೂರು , ಕ್ರೈಸ್ಟ್ ಪಿ ಯು ಕಾಲೇಜು ಕಾರ್ಕಳ ,ಇಲ್ಲಿನ ಶಾಲಾ ಕಾಲೇಜಿನ ಬನ್ನಿಸ್ ,ಕಬ್ ,ಬುಲ್ ಬುಲ್ ,ಸ್ಕೌಟ್ ಅಂಡ್ ಗೈಡ್ಸ್ ಹಾಗೂ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದರಲ್ಲಿ ಬನ್ನಿಸ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವರ್ಧಮಾನ ಸ್ಕೂಲು ಕಾರ್ಕಳ ದ್ವಿತೀಯ ಸ್ಥಾನ ಜೇಸಿಸ್ ಸ್ಕೂಲು ಕಾರ್ಕಳ ತೃತೀಯ ಸ್ಥಾನ ಕ್ರೈಸ್ಟ್ ಕಿಂಗ್ ಸ್ಕೂಲು ಕಾರ್ಕಳ ಕಬ್ ವಿಭಾಗದಿಂದ ಪ್ರಥಮ ಸ್ಥಾನ ವರ್ಧಮಾನ ಸ್ಕೂಲು ಕಾರ್ಕಳ ದ್ವಿತೀಯ ಸ್ಥಾನ ಜೇಸಿಸ್ ಸ್ಕೂಲು ಕಾರ್ಕಳ ತೃತೀಯ ಸ್ಥಾನ ಕ್ರೈಸ್ಟ್ ಕಿಂಗ್ ಸ್ಕೂಲು ಕಾರ್ಕಳ ಬುಲ್ ಬುಲ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವರ್ಧಮಾನ ಸ್ಕೂಲು ಕಾರ್ಕಳ ದ್ವಿತೀಯ ಸ್ಥಾನ ಕ್ರೈಸ್ಟ್ ಕಿಂಗ್ ಸ್ಕೂಲು ಕಾರ್ಕಳ ತೃತೀಯ ಸ್ಥಾನ ಜೇಸಿಸ್ ಸ್ಕೂಲು ಕಾರ್ಕಳ ಸ್ಕೌಟ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕ್ರೈಸ್ಟ್ ಕಿಂಗ್ ಪಿ ಯು ಕಾಲೇಜು ಕಾರ್ಕಳ ದ್ವಿತೀಯ ಸ್ಥಾನ ಶ್ರೀ ಭುವನೇಂದ್ರ ವಿದ್ಯಾಸಂಸ್ಥೆ ಕಾರ್ಕಳ ತೃತೀಯ ವರ್ಧಮಾನ ಸ್ಕೂಲು ಕಾರ್ಕಳ ಗೈಡ್ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಜ್ಞಾನಸುಧಾ ಪಿ ಯು ಕಾಲೇಜು ಗಣಿತ ನಗರ ಕಾರ್ಕಳ ದ್ವಿತೀಯ ಸ್ಥಾನ ಭುವನೇಂದ್ರ ವಿದ್ಯಾ ಸಂಸ್ಥೆ ಕಾರ್ಕಳ ತೃತೀಯ ಸ್ಥಾನ ಜೇಸಿಸ್ ಸ್ಕೂಲು ಕಾರ್ಕಳ ರೋವರ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಕ್ರೈಸ್ಟ್ ಕಿಂಗ್ ಪಿಯು ಕಾಲೇಜು ಕಾರ್ಕಳ ರೇಂಜರ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಸರ್ಕಾರಿ ಪಿಯು ಕಾಲೇಜು ಸಾಣೂರು ದ್ವಿತೀಯ ಕ್ರೈಸ್ಟ್ ಕಿಂಗ್ ಪಿ ಯು ಕಾಲೇಜು ಸ್ಥಾನವನ್ನು ಗಳಿಸಿ ವಿಜೇತರಾದರು.
ವಿಜೇತರಿಗೆ ಫಲಕ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಫಲಕ ಬಹುಮಾನವನ್ನು ದಿ ಎಂ ಕೆ ವಿಜಯ ಕುಮಾರ್ ಇವರ ಸವಿ ನೆನಪಿನಲ್ಲಿ ಕಾರ್ಕಳ ಘಟಕದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಇವರು ಕೊಡ ಮಾಡಿದರು.
ಪ್ರಥಮ ಸ್ಥಾನ ಗಳಿಸಿದ ತಂಡ ಮುಂದೆ ನಡೆಯಲಿರುವ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಈ ಸ್ಪರ್ಧೆಯಲ್ಲಿ ಸುಮಾರು ನೂರೈವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



















































