
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀಮತಿ ಗೀತಾ ಟಿ. ಗೌರವಾನ್ವಿತ ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರು ಕಾರ್ಕಳ ಇವರು ಗಿಡವನ್ನು ನೆಟ್ಟು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯವನ್ನು ತಿಳಿಸಿ ಶುಭ ಹಾರೈಸಿದರು.ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ಆನಂದರಾಯ ನಾಯಕ್ ರವರು ಅಧ್ಯಕ್ಷಸ್ಥಾನದಿಂದ ಪರಿಸರ ರಕ್ಷಣೆಯ ಮಹತ್ವ ತಿಳಿಸಿದರು.
ಕೆ ಹರೀಶ್ ಅಧಿಕಾರಿ, ಉಪಾಧ್ಯಕ್ಷರು ನ್ಯಾಯವಾದಿಗಳ ಸಂಘ ಕಾರ್ಕಳ ಇವರು ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಗಿಡವನ್ನು ನೆಟ್ಟು ಪರಿಸರದ ಮಹತ್ವವನ್ನು ತಿಳಿಯಪಡಿಸಿದರು.ವಿಜ್ಞಾನ ಶಿಕ್ಷಕಿ ಶ್ರೀಮತಿ ಲಲಿತಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ಮಹತ್ವ, ಕಲುಷಿತ ವಾತಾವರಣ,ಪ್ರತೀದಿನ ಯಾವ ರೂಪದಲ್ಲಿ ರಾಸಾಯನಿಕ ನಮ್ಮ ದೇಹದೊಳಗೆ ಹೋಗ್ತದೆ.ನಾವು ಅದನ್ನು ತಡೆಯುವ ಬಗೆ ಹೇಗೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿದರು ಅತಿಥಿಗಳು, ವಿದ್ಯಾರ್ಥಿಗಳು ಶಿಕ್ಷಕರು ಎಲ್ಲರೂ ಗಿಡಗಳನ್ನು ನೆಟ್ಟು ದಿನದ ಸಾರ್ಥಕ್ಯವನ್ನು ಮೆರೆದರು.





