
ಕಾರ್ಕಳ ತಾಲೂಕಿನ ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘ ನಿಯಮಿತ ಸೊಸೈಟಿಯವರು ಸಾಲ ವಸೂಲಾತಿಗಾಗಿ ಸಾಣೂರಿನ ಮೂಸಬ್ಬ ಎಂಬುವವರ ವಿರುದ್ಧ ದಾಖಲಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯ ಪರ ವಕೀಲರು ಸಾಲ ವಸೂಲಾತಿಯ ಕ್ರಮ ಕಾನೂನುಬದ್ದವಾಗಿಲ್ಲ ಎಂದು ಸಾಬೀತು ಪಡಿಸಿದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್.ಸಿ ಇವರು ಆರೋಪಿಯಾದ ಮೂಸಬ್ಬ ಇವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ಕಾರ್ಕಳದ ನ್ಯಾಯವಾದಿ ರವಿಶಂಕರ್ ಬಿ.ಎಂ ಇವರು ವಾದಿಸಿದ್ದರು





