
ಕಾರ್ಕಳ : ಕಾರ್ಕಳದ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 05 /09 /2025 ಮತ್ತು 06/09/2025 ರಂದು “ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆ ” ಎಂಬ ವಿಷಯದ ಕುರಿತು ಎರಡು ದಿನಗಳ ಶಿಕ್ಷಕರ ತರಬೇತಿ ಕಾರ್ಯಕ್ರಮ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿ ಕಾರ್ಯಗಾರವನ್ನು ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ.ಪ್ರಶಾಂತ್ ಹೆಗ್ಡೆ ಹಾಗೂ ಶಾಲಾ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ರವೀಂದ್ರ ಕಾಮತ್ ಇವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.ಈ ಕಾರ್ಯಗಾರದಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಉಪಸ್ಥಿತರಿದ್ದರು. ಕಾರ್ಯಗಾರಕ್ಕೆ ತರಬೇತುದರರಾಗಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಡಾ. ಗುರುರಾಜ್ ಇಟಗಿ ಹಾಗೂ ಶ್ರೀಮತಿ ವಿದ್ಯಾಲಕ್ಷ್ಮಿಯವರು ಆಗಮಿಸಿ, ಕಲಿಕೆ ಹಂತದಲ್ಲಿ ಮಕ್ಕಳ ಸಮಸ್ಯೆ ನಿರ್ವಹಣೆ , ತಾರ್ಕಿಕವಾಗಿ ಆಲೋಚಿಸುವುದು ಹಾಗೂ ನಿರ್ಧಾರ ತೆಗೆದುಕೊಳ್ಳುವ ಕೌಶಲದಲ್ಲಿ ಶಿಕ್ಷಕರು ಗುಣಾತ್ಮಕವಾಗಿ ನಿರ್ವಹಿಸುವುದಕ್ಕೆ ಅನೇಕ ವಿಧವಾದ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ತಿಳಿಸಿದರು. ಕಾರ್ಯಗಾರದಲ್ಲಿ ಶಿಕ್ಷಕರು ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಎರಡನೇ ದಿನದ ಅಂತಿಮ ಹಂತದಲ್ಲಿ ಭಾಗವಹಿಸಿದ ಅನೇಕ ಶಿಕ್ಷಕ_ಶಿಕ್ಷಕಿಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಕಾರ್ಯಗಾರದಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸಿಬಿಎಸ್ಸಿ ಪ್ರೌಢಶಾಲೆ ಕಾರ್ಕಳ, ಎಂ.ಕೆ .ಶೆಟ್ಟಿ ಪ್ರೌಢಶಾಲೆ ಮೂಡಬಿದಿರೆ, ಹಾಗೂ ಸೈಂಟ್ ಸಿಸಿಲಿಯಾ ಪ್ರೌಢಶಾಲೆ ಉಡುಪಿ ಇಲ್ಲಿಯ ಶಿಕ್ಷಕರು ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು.