
ಕಾರ್ಕಳ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಾರ್ಕಳ ಇಲ್ಲಿಯ ವಿದ್ಯಾರ್ಥಿನಿ ಕುಮಾರಿ ಮಾನ್ಸಿ ನಾಯಕ್ 622 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ.
ಸಂಸ್ಕೃತದಲ್ಲಿ 125 ಅಂಕಗಳು, ಇಂಗ್ಲಿಷ್ 100 ಕನ್ನಡ 100 ಗಣಿತ ವಿಜ್ಞಾನ ಸಮಾಜ ದಲ್ಲಿ ತಲಾ 99 ಅಂಕಗಳನ್ನು ಪಡೆದಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಅಧ್ಯಕ್ಷರು, ಸರ್ವ ಸದಸ್ಯರು ಶಾಲಾ ಆಡಳಿತ ಮಂಡಳಿ,ಪೋಷಕರು ಮತ್ತು ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.