೨೪ ತೀರ್ಥಂಕರರ ಪೂಜಾ ಕಾರ್ಯಕ್ರಮ ಹಾಗೂ ಕಾರ್ತಿಕ ದೀಪೋತ್ಸವ

ಕಾರ್ಕಳ: ದಿನಾಂಕ 16.11.2025 ರಂದು ಶ್ರೀ ಕ್ಷೇತ್ರ ಜೈನ ಮಠದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ೨೪ ತೀರ್ಥಂಕರರ ಪೂಜಾ ಕಾರ್ಯಕ್ರಮಗಳು ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಜೈನ ಮಠ ದಾನಶಾಲೆಯ ಪರಮಪೂಜ್ಯ ಸ್ವಸ್ತಿ ಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಇವರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ಜರುಗಲಿದೆ.
ಮಧ್ಯಾಹ್ನ 1:00 ಗಂಟೆಗೆ ಸಂಘಸಂತರ್ಪಣೆ, ರಾತ್ರಿ 7:00ಯಿಂದ ದೀಪ ಪ್ರಜ್ವಲನೆ, ಶ್ರೀ ಚಂದ್ರನಾಥ ಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ ಶ್ರೀ ಜಿನಗಂದೋಧಕ ವಿತರಣೆ ನಡೆಯಲಿದೆ.






