ಸುಧೀರ್ ಕುಮಾರ್ ಮಾರೋಳಿ
ವೇದಿಕೆಯಲ್ಲಿ ಕಿರಿಚಿದ ಕೂಡಲೇ ಯಾರು ಹೆದರುವುದಿಲ್ಲ, ಕಾರ್ಕಳದಲ್ಲಿ ಮಾತ್ರ ನಕಲಿ ಕಂಚಿನ ಮೂರ್ತಿ ನಿರ್ಮಾಣವಾಗಿದೆ
- ಮುನಿಯಾಲ್ ಉದಯ್ ಶೆಟ್ಟಿ

ಕಾರ್ಕಳ : ಕಳ್ಳರು ವಿಪರೀತವಾಗಿ ಮಾತನಾಡಿದಾಗ ಸಜ್ಜನರು ಸುಮ್ಮನೆ ಕುಳಿತರೆ ಕಳ್ಳರ ಮಾತೇ ನಿಜವಾಗಿ ಹೋಗಬಹುದು ಎನ್ನುವ ಅಪಾಯವಿರುವುದರಿಂದ ಸಂಕಲ್ಪ ಸಭೆ ನಡೆಯುತ್ತಿದೆ. ಕಾರ್ಕಳ ಶಾಸಕರು ಶಕ್ತಿ,ಧೈರ್ಯ, ನೈತಿಕತೆಯಿದ್ದರೆ ನಿಮ್ಮ ತಂದೆ
ತಾಯಿಯ ಪಾದ ಮುಟ್ಟಿ ಕಂಚಿನ ಪ್ರತಿಮೆ ಎಂದೇ ನಂಬಿದ್ದೆ ಎನ್ನುವ ಪ್ರಮಾಣ ಮಾಡಿ. ಮೂರ್ತಿಯ ಪಾದಕ್ಕೆ ಸುತ್ತಿಗೆಯಲ್ಲಿ ಹೊಡೆಯಲು ಬಿಜೆಪಿಗರಿಗೆ ಅಧಿಕಾರವನ್ನು ಕೊಟ್ಟವರು ಯಾರು? ಅದು ಸರ್ಕಾರದ ಆಸ್ತಿ. ಸುತ್ತಿಗೆಯಲ್ಲಿ ಹೊಡೆದದ್ದು ಬರೀ ಮೂರ್ತಿಗಲ್ಲ ಅದು ವಿಶಾಲವಾದ ಹಿಂದೂ ಸಂಸ್ಕೃತಿಗೆ ಪೆಟ್ಟುಕೊಟ್ಟದ್ದು. ಸುತ್ತಿಗೆಯಲ್ಲಿ ಹೊಡೆಯುವವರು ಸಂಸ್ಕೃತಿ ವಂಚಕರು, ಧರ್ಮ ದ್ರೋಹಿಗಳು ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಹೇಳಿದರು. ಅವರು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವತಿಯಿಂದ ಬೈಲೂರಿನ ಮಾರಿಗುಡಿ ಸಭಾಂಗಣದಲ್ಲಿ ಶನಿವಾರ ನಡೆದ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಸಂಕಲ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ ಪರಶುರಾಮ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪ್ರಚಾರ ಪಡೆದುಕೊಂಡು ತರಾತುರಿಯಲ್ಲಿ ಉದ್ಗಾಟನೆ ಮಾಡಿ, ಈಗ ಜನರನ್ನು ವಂಚಿಸಿದ್ದೂ ಶಾಸಕ ಸುನಿಲ್‌ಕುಮಾರ್ ರವರು. ಈಗ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ನವರು ಎಂದು ಕಿರಿಚಿಕೊಂಡು ತಿರುಗುತ್ತಿದ್ದಾರೆ. ಅರ್ಧ ಮೂರ್ತಿ ತೆರವಾದ ಬಗ್ಗೆ ಯಾರಲ್ಲೂ ಮೂಹಿತಿಯಿಲ್ಲ. ಪೊಲೀಸರ ಸಮ್ಮಖದಲ್ಲಿ ಮೂರ್ತಿ ಹೇಗೆ ಕಳವಾಯಿತು. ತೆರವುಗೊಂಡ ಮೂರ್ತಿ ಬೆಂಗಳೂರಿಗೆ ತೆರಳಿದ ಬಗ್ಗೆ ದಾಖಲೆಗಳಿಲ್ಲ.
ಸರಕಾರದಿಂದ ತಿರಸ್ಕರವಾದ ಪ್ರಸ್ತಾವನೆಗೆ ಅನುದಾನ ಕೇಳುವುದು ಯಾವ ಮುಖ ಇಟ್ಟುಕೊಂಡು ನಕಲಿ ಮೂರ್ತಿ ಎಂದು ಗೊತ್ತಿದ್ದರೂ ಸಮರ್ಥಿಸುವುದು ಎಷ್ಟು ಸರಿ ಎಂದರು.
ಬೈಲೂರಲ್ಲಿ ಕಂಚಿನ ಮೂರ್ತಿ ನಿರ್ಮಾಣ ಬರೀ ಎರಡು ತಿಂಗಳಲ್ಲಿ ಹೇಗೆ ಸಾಧ್ಯವಾಯಿತು. ಕರ್ನಾಟಕದ ಬೆಂಗಳೂರು ಸೇರಿದಂತೆ ಹಲವು ಕಡೆಯಲ್ಲಿ ಕಂಚಿನ ಮೂರ್ತಿ ನಿರ್ಮಾಣವಾಗಿದೆ. ಆದರೆ ನಕಲಿ ಮೂರ್ತಿ ಸ್ಥಾಪನೆ ಆಗಿರುವುದು ಕಾರ್ಕಳದಲ್ಲಿ ಮಾತ್ರ ಎಂದರು.
ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ನಾವು ಸಂತೋಷ ಪಟ್ಟಿದ್ದೆವು. ನಿಮ್ಮಿಂದ ತಪ್ಪಾಗಿದೆ ಎಂದು ಗೊತ್ತಿದ್ದರೂ ಮೂರ್ತಿಯ ಅಸಲಿಯತ್ತು ಬಗ್ಗೆ ಇದೇ ವೇದಿಕೆಯಲ್ಲಿ ವಾದ ಮಾಡಿದ್ರು.ಕಾರ್ಕಳ ಕಲ್ಲಿನಲ್ಲಿ ಹೆಸರುವಾಸಿಯಾದ ಸ್ಥಳ. ಪರಶುರಾಮನ ಮೂರ್ತಿಯನ್ನು ಯಾಕೆ ಕಲ್ಲಿಂದ ನಿರ್ಮಿಸಬಾರದು?
ವೇದಿಕೆಯಲ್ಲಿ ಕಿರುಚಿದ ಕೂಡಲೇ ಯಾರು ಹೆದರುವುದಿಲ್ಲ. ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಗೆಲ್ಲಲು ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ್ದು ತಪ್ಪಾಗಿದೆ ನನ್ನಿಂದ ಎಂದು ಹೇಳಿದ್ದರೆ ಮೂರ್ತಿ ನಿರ್ಮಾಣ ಮಾಡಲು ಕೈಜೋಡಿಸುತ್ತಿದ್ದೆವು ಎಂದರು.ಸುನಿಲ್‌ಕುಮಾರ್ ಬಂದ ಮೇಲೆ ಕಾರ್ಕಳ ಉದ್ಭವವಾದದ್ದಲ್ಲ. ಸುನಿಲ್ ಕುಮಾರ್ ಬಂದ ನಂತರ ಕಾರ್ಕಳದಲ್ಲಿ ರಾಜಕೀಯ ದ್ವೇಷ ಹುಟ್ಟಿಕೊಂಡದ್ದು ಎಂದರು.
ಕ್ಷೇತ್ರದಲ್ಲಿ ಹಿರಿಯರಿದ್ದಾರೆ ಅವರ ಸಭೆ ನಡೆಸಿ ಅಭಿಪ್ರಾಯ ಪಡೆಯಿರಿ. ಪರಶುರಾಮ ಥೀಂ ಪಾರ್ಕ್ ಬಿಜೆಪಿ ಪಕ್ಷಕ್ಕೆ ಸೇರಿದ್ದಲ್ಲ. ತಾ.ಪಂ, ಜಿ.ಪಂ, ಗ್ರಾ.ಪಂ ಚುನಾವಣೆಯ ಲಾಭಕ್ಕಾಗಿ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡುವುದಲ್ಲ. ಮುಂದಿನ 200-300 ವರ್ಷಗಳ ಕಾಲದವರೆಗೆ ಅದು ಉಳಿಯುವಂತಿರಬೇಕು ಎಂದರು.
ಸಭೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ನೀರೆ ಕೃಷ್ಣ ಶೆಟ್ಟಿ, ಜ್ಯೋತಿ ಹೆಬ್ಬಾರ್, ಸುನಂದ ನಾಯಕ್, ಸದಾಶಿವ ದೇವಾಡಿಗ, ಆಶಾ ಬೈಲೂರು, ಪ್ರದೀಪ್ ಕುಮಾರ್ ಯರ್ಲಪಾಡಿ, ಸುಬೀತ್ ಎನ್.ಆರ್, ರಮೇಶ್ ಕಾಂಚನ್, ಸುರೇಂದ್ರ ಶೆಟ್ಟಿ, ವಿಶ್ವಾಸ್, ರಮಾನಂದ ಪೈ, ಭೋಜ ಶೆಟ್ಟಿ ಯರ್ಲಪಾಡಿ, ನಿತೀನ್ ಮತ್ತಿತರಿದ್ದರು. ಶುಭದ ರಾವ್ ಕಾರ್ಯಕ್ರಮ
ನಿರೂಪಿಸಿದರು.