26 C
Udupi
Monday, March 9, 2026
spot_img
spot_img
HomeBlogಕಾರ್ಕಳ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅದ್ದೂರಿ "ವಾಕಥಾನ್"ಮತ್ತು ದಶಮಾನೋತ್ಸವ

ಕಾರ್ಕಳ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅದ್ದೂರಿ “ವಾಕಥಾನ್”ಮತ್ತು ದಶಮಾನೋತ್ಸವ

ಸೃಜನಶೀಲ ಸಮಾಜಕ್ಕೆ ಮಹಿಳೆಯರ ಪಾತ್ರ ದೊಡ್ಡದು: ಶಾಸಕ ವಿ. ಸುನಿಲ್ ಕುಮಾರ್

ಆರು ಮಂದಿ ಸಾಧಕಿಯರಿಗೆ ಸನ್ಮಾನ

​ ಕಾರ್ಕಳ: ಸ್ಥಳೀಯ ಪದ್ಮಾವತಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ರವಿವಾರ (ಮಾ. 8) ಸ್ವರಾಜ್ ಮೈದಾನದಲ್ಲಿ ಬೃಹತ್ ‘ವಾಕಥಾನ್’ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.


​ನಡಿಗೆಗೆ ಚಾಲನೆ:
ಬೆಳಿಗ್ಗೆ 6:15ಕ್ಕೆ ಜ್ಯೋತಿ ಜೆ. ಪೈ ಅವರಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕುಮಾರಿ ಅದಿತಿ ರಾವ್ ಅವರ ನೇತೃತ್ವದಲ್ಲಿ ವಾರ್ಮ್‌-ಅಪ್ ವ್ಯಾಯಾಮ ನಡೆದ ಬಳಿಕ, ರಿಬ್ಬನ್ ಕತ್ತರಿಸಿ ಬಾವುಟ ತೋರಿಸುವ ಮೂಲಕ 5 ಕಿ.ಮೀ. ಉದ್ದದ ಬೃಹತ್ ಕಾಲ್ನಡಿಗೆಗೆ ಚಾಲನೆ ನೀಡಲಾಯಿತು. ಸೀಮಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.


​ಸೃಜನಶೀಲ ಸಮಾಜಕ್ಕೆ ಮಹಿಳೆಯರ ಪಾತ್ರ ದೊಡ್ಡದು – ಶಾಸಕ ಸುನಿಲ್ ಕುಮಾರ್:
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, “ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಸಂಘಟಿತವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಆರೋಗ್ಯದ ದೃಷ್ಟಿಯಿಂದ ವಾಕಥಾನ್‌ನಂತಹ ಪ್ರಯತ್ನಗಳು ಸ್ತುತ್ಯರ್ಹ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಟು ಮಂದಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಲಾಯಿತು ಹಾಗೂ
ಸೇವಾ ಭಾರತೀಯ ಮಣಿಪುರಿ ಮಕ್ಕಳಿಗೆ ಧನಸಹಾಯ ನೀಡಲಾಯಿತು
ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳಿಗೆ ದನ ಸಹಾಯ ನೀಡಲಾಯಿತು.


​ಆರು ಮಂದಿ ಸಾಧಕಿಯರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಮಹಿಳೆಯರಾದ ನಿರ್ಮಲಾ ಪೈ, ಪ್ರಭಾ ಕಿಶೋರ್, ಭಾರತಿ ಅಮೀನ್, ಯಶೋದಾ ಶೆಟ್ಟಿ, ಶಶಿಕಲಾ ಹೆಗ್ಡೆ ಹಾಗೂ ಶಕುಂತಲಾ ಶೆಣೈ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


​ಗಣ್ಯರ ಉಪಸ್ಥಿತಿ:
ಸಭಾ ಕಾರ್ಯಕ್ರಮದಲ್ಲಿ ಮಹಾದಾನಿ ಕಮಲಾಕ್ಷ ಕಾಮತ್, ಬೋಳ ಆಗ್ರೋ ಇಂಡಸ್ಟ್ರೀಸ್ ಮಾಲಕಿ ಬೋಳಾ ಶಾಲಿನಿ ಕಾಮತ್, ಉದ್ಯಮಿ ಅನಂತ ಕೃಷ್ಣ ಶೆಣೈ, ಡಾ| ಆಶಾ ಪಿ. ಹೆಗ್ಡೆ, ಸಮಾಜ ಸೇವಕಿ ಉಡುಪಿ ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ನ ಆಯುಕ್ತೆ ಜ್ಯೋತಿ ಜೆ. ಪೈ, ಗುರುಗಳಾದ ಗಾನಗಂಧರ್ವ ಬಿರುದಾಂಕಿತ ವಿದ್ವಾನ್ ಯೋಗೇಶ್ ಕಿಣಿ ಹಾಗೂ ಪದ್ಮಾವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅರ್ಚನಾ ಕಿಣಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
​ಸುಷ್ಮಾ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ವಾರಿಜಾ ವಿ. ಕಾಮತ್ ಸ್ವಾಗತಿಸಿ, ಕೋಶಾಧಿಕಾರಿ ರಶ್ಮಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಳಾ ಗೀತಾ ಕಾಮತ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲ್ನಡಿಗೆಯಲ್ಲಿ ವಿಜೇತರಾದ ಅವನಿ, ಶ್ರೇಯಾ ,ಅನನ್ಯಾ ಅವರಿಗೆ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದಂತಹ ಹತ್ತು ವರ್ಷದ ಬಾಲಕಿಯರಾದ ಅಂಜನಿ , ಭೂವಿ ಹಾಗೂ ಹಿರಿಯ ನಾಗರಕರಿಕರಾದ ಪ್ರಭಾ ವಿಜಯ್ ರವರಿಗೂ ಪದಕ ನೀಡಿ ಗೌರವಿಸಲಾಯಿತು.
ಭಾಗವಹಿಸಿದವರಿಗೆಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಲಕ್ಷ್ಮಿ ಪ್ರಭು ಧನ್ಯವಾದ ಸಮರ್ಪಣೆ ಮಾಡಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page