ಸಮವಸ್ತ್ರ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ

ವಿಜೇತ ವಿಶೇಷ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಕುಕ್ಕುಂದೂರು ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ಕಿಣಿ ಇವರು ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ,ಸಭಾ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ಇವರ ಸೇವೆಯನ್ನು ಪರಿಗಣಿಸಿ ಶಾಲಾ ವತಿಯಿಂದ ಇವರನ್ನು ಗೌರವಿಸಲಾಯಿತು.

ಶ್ರೀಮತಿ ಶೈನಾ ಗಣೇಶ್ ಶೆಟ್ಟಿ ಇವರ ವತಿಯಿಂದ ದೇಣಿಗೆಯಾಗಿ ನೀಡಿದಂತಹ ಸಮವಸ್ತ್ರಗಳನ್ನು ಉದ್ಯಮಿಗಳಾದ ಪ್ರವೀಶ್ ಶೆಟ್ಟಿ & ದೀಪ ಪ್ರವೀಶ್ ಶೆಟ್ಟಿ ದಂಪತಿಗಳು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿ ಸಂಸ್ಥೆಗೆ 15 ಸಾವಿರ ದೇಣಿಗೆಯನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಪ್ರಶಾಂತ್ ಶೆಣೈ, ಅಧ್ಯಕ್ಷರಾದ ಅಜಿತ್, ಕಾರ್ಯದರ್ಶಿ ಖಾದರ್, ಕೋಶಾಧಿಕಾರಿ ರಾಜೇಶ್, ಜನಪ್ರಿಯ ರೈಸ್ ಮಿಲ್ ಮಾಲಕರಾದ ಮಂಜುನಾಥ್, ಅಂಕಿತಾ ಕಾಮತ್, ವಿಜೇತ ವಿಶೇಷ ಶಾಲಾ ಅಧ್ಯಕ್ಷರು ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಕೆ ರಾಧಾಕೃಷ್ಣ ಶೆಟ್ಟಿ, ಸಂಸ್ಥಾಪಕಿ ಡಾ. ಕಾಂತಿ ಹರೀಶ್, ವೇದಿಕೆಯಲ್ಲಿ ಉಪಸ್ತಿತರಿದ್ದರು.

ಮ್ಯಾನೇಜಿoಗ್ ಟ್ರಸ್ಟಿ ಹರೀಶ್, ಟ್ರಸ್ಟಿ ಕಿರಣ್ ಶೆಟ್ಟಿ, ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳ ಪೋಷಕರು ಶಾಲಾ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕುಕ್ಕುಂದೂರು ಗ್ರಾಮ ಪಂಚಾಯತ್, ಶ್ರೀ ಮಂಜುನಾಥ್, ಕಾರ್ಕಳ ಮೊಬೈಲ್ ರಿಟೈಲರ್ ಅಸೋಸಿಯೇಶನ್, ಶಾಂತಿ ಕಿಣಿ ಇವರ ವತಿಯಿಂದ ಸಿಹಿತಿಂಡಿ ವಿತರಿಸಿದರು. ಗಿರೀಶ್ & ಶ್ರೀಮತಿ ಪೂಜಾ ದಂಪತಿಗಳು ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿ ಡಾ. ಕಾಂತಿ ಹರೀಶ್ ಸ್ವಾಗತಿಸಿ, ಸಿಬ್ಬಂದಿ ಹಾಗೂ ಮಕ್ಕಳು ಪ್ರಾರ್ಥನೆಯನ್ನು ನೆರವೇರಿಸಿ, ಶ್ರೀಮತಿ ಶ್ರೀನಿಧಿ ವಂದಿಸಿದರು.