
ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ಸಹಯೋಗದಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಯಶೋಧರ್ ಹಾಗೂ ಡಾಕ್ಟರ್ ಅನ್ನಪೂರ್ಣ ದಂತ ವೈದ್ಯರು, ಜೋಡು ರಸ್ತೆ ಇವರು ಜನತೆಗೆ ನೀಡುತ್ತಿರುವ ಸುಧೀರ್ಘ ಸೇವೆಯನ್ನು ಗುರುತಿಸಿ , ಗೌರವಯುತವಾಗಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಇವರು ಆರೋಗ್ಯವನ್ನು ಕಾಪಾಡಿ ಕೊಳ್ಳುವ ಮುನ್ನೆಚ್ಚರಿಕೆ ಕ್ರಮವನ್ನು ಪ್ರಾತ್ಯಾಕ್ಷಿತೆಯ ಮೂಲಕ ಮಕ್ಕಳಿಗೆ ತಿಳಿ ಹೇಳುತ್ತಾ, ಮೊಬೈಲ್ ಅತಿಯಾದ ಬಳಕೆಯಿಂದ ಆಗುವ ಅನಾಹುತಗಳು, ಆಹಾರ ಪದ್ಧತಿ, ಸ್ವಚ್ಛತೆ ಮತ್ತು ಚರ್ಮದ ಸಂರಕ್ಷಣೆಯ ಬಗ್ಗೆ ಸಂಕ್ಷಿಪ್ತವಾಗಿ ಮಕ್ಕಳಿಗೆ ಮನವರಿಕೆ ಮಾಡಿದರು. ವರ್ಧಮಾನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ದಂತ ವೈದ್ಯರಾದ ಡಾಕ್ಟರ್ ಅನ್ನಪೂರ್ಣ ರವರು ಮಕ್ಕಳಿಗೆ ಹಲ್ಲುಗಳ ಆರೈಕೆ ಹಾಗೂ ಹಲ್ಲುಗಳನ್ನು ಬ್ರಷ್ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮುಖಾಂತರ ಮಕ್ಕಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ, ಶಶಿಕಲಾ .ಕೆ ಹೆಗ್ಡೆ , ಕುಮಾರಯ್ಯ ಹೆಗ್ಡೆ, ರೋಟರಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್, ರೋ| ನವೀನ್ ಶೆಟ್ಟಿ, ರೋ| ವಸಂತ್, ರೋ| ಚೇತನ್ ನಾಯಕ್, ಆಡಳಿತಾಧಿಕಾರಿ ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು. ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಸ್ಥೆಯ ಗೈಡ್ಸ್ ವಿದ್ಯಾರ್ಥಿಗಳಾದ ಸುಮತಿ ಕಾರ್ಯಕ್ರಮ ನಿರೂಪಿಸಿ, ಶ್ರುತ ಜೈನ್ ಅತಿಥಿ ಪರಿಚಯ ನೀಡಿ, ಫಲಕ್ ಫಾತಿಮಾ ಧನ್ಯವಾದಗೈದರು.