ಬೆಳ್ಮಣ್ಣಿನ ಖಾಸಗಿ ಲಾಡ್ಜ್ನಲ್ಲಿ ಘಟನೆ, ಡೆತ್ ನೋಟ್ ನಲ್ಲಿ ಗೆಳೆಯರ ಹೆಸರು ಉಲ್ಲೇಖ…

ಕಾರ್ಕಳ: ಗೆಳೆಯರ ಬ್ಲ್ಯಾಕ್ಮೇಲ್ ಒತ್ತಡ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಬೆಲ್ಮಣ್ಣಿನ ಖಾಸಗಿ ಲಾಡ್ಜ್ನಲ್ಲಿ ನಡೆದಿದೆ.
ಮೃತ ಯುವಕನನ್ನು ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಪ್ರೀತಿಸಿದ ಯುವತಿ ಜತೆಗಿದ್ದ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಗೆಳೆಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಡೆತ್ ನೋಟ್ನಲ್ಲಿ ನಾಲ್ವರು ಬ್ಲ್ಯಾಕ್ಮೇಲ್ ಮಾಡಿದವರ ಹೆಸರು ಉಲ್ಲೇಖಿತವಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಮೃತ ಯುವಕನ ಮೊಬೈಲ್ ಮತ್ತು ತಾಂತ್ರಿಕ ಆಯಾಮದಲ್ಲಿ ಪರಿಶೀಲನೆ ನಡೆಯುತ್ತಿದೆ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಹೆಸರಿಸಿದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.






















































