
ಮಂಗಳೂರು: ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಏಪ್ರಿಲ್ 11ರಿಂದ ಏಪ್ರಿಲ್ 20, ರವರೆಗೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣ ಕಾರ್ಕಳದಲ್ಲಿ ನಡೆಯಲಿರುವ “ಆಟ-ಪಾಠ: ಮಕ್ಕಳ ರಂಗ ಶಿಬಿರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
8 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿದ್ದು, ಮೊದಲು ನೋಂದಾಯಿಸಿದ 60 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಆಸಕ್ತರು ಏಪ್ರಿಲ್ 1ರಿಂದ 6, 2026ರೊಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ನೋಂದಣಿ ಶುಲ್ಕ ರೂ.1,000/- ಆಗಿದೆ. ನೋಂದಾವಣಿಗೆ ಬರುವಾಗ ಮಕ್ಕಳ ಆಧಾರ್ ಪ್ರತಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿ ತರಬೇಕಿದ್ದು ಹೆಚ್ಚಿನ ಮಾಹಿತಿಗಾಗಿ 7676501443, 9900987866, 9980358653, 8123471121 ಸಂಖ್ಯೆಗಳ ಸಂಪರ್ಕಿಸಬಹುದು ಎಂದು ಯಕ್ಷ ರಂಗಾಯಣ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.









