
ಕಾರ್ಕಳ: ಮಂಗಳೂರು ನಗರಕ್ಕೆ ಸೇಬು ಸಾಗಿಸುತ್ತಿದ್ದ ಲಾರಿಯೊಂದು ಕುದುರೆಮುಖ ಮಾಳ ಘಾಟಿ ಬಳಿ ಶನಿವಾರ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.
ಕಾಶ್ಮೀರದಿಂದ ಮಂಗಳೂರು ನಗರಕ್ಕೆ ತೆರಳುತ್ತಿದ್ದ ಲಾರಿ ಸುಮಾರು ಎರಡು ಗಂಟೆಯ ವೇಳೆಗೆ ಲಾರಿಯ ಹಿಂದಿನ ಎಡಗಡೆಯ ಟೈಯರ್ ಸ್ಪೋಟಗೊಂಡು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಪರಿಣಾಮವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಾರ್ಕಳ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.






















































