
ಯೂತ್ ರೆಡ್ ಕ್ರಾಸ್ ದಿನಾಚರಣೆ ಯ ಅಂಗವಾಗಿ ಭುವನೇಂದ್ರ ಕಾಲೇಜಿನಲ್ಲಿ ಎಂ.ಪಿ. ಎಂ ಸರಕಾರಿ ಕಾಲೇಜಿನ ಅಸಿಸ್ಟೆಂಟ್ ಪ್ರೊ. ಡಾ.ಡಿ.ಪ್ರಭು ಪಿ ಅವರು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಲು ಸಮೂಹ ಶಕ್ತಿಯಿಂದ ಹೇಗೆ ಸಾಧ್ಯ ಎನ್ನುವುದನ್ನು ಹಾಗೂ ಜೀವನ ಕೌಶಲ್ಯದ ಬಗ್ಗೆ ಉಪನ್ಯಾಸ ನೀಡಿ, ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಯೂತ್ ರೆಡ್ ಕ್ರಾಸ್ ನ ಎಲ್ಲಾ ವಿದ್ಯಾರ್ಥಿಗಳು ಈ ಉಪನ್ಯಾಸದಲ್ಲಿ ಪಾಲ್ಗೊಂಡು ಜೀವನ ಕೌಶಲ್ಯ ಹಾಗೂ ಗುಂಪು ಚಟುವಟಿಕೆಯ ಕುರಿತ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಐಕ್ಯೂಎಸಿ ನಿರ್ದೇಶಕರಾದ ಪ್ರೊ.ಹೆಚ್.ಜಿ.ನಾಗಭೂಷಣ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ವಿದ್ಯಾರ್ಥಿ ಕಾರ್ಯದರ್ಶಿ ಕು. ಅಮೃತ, ಸಹ ಕಾರ್ಯದರ್ಶಿ ಕು.ಪೂರ್ವಿ, ನಂಯೋಜಕಿ ಶ್ರೀಮತಿ ಚೈತ್ರ ಎನ್. ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಪ್ರೊ.ಶಿವಕುಮಾರ್ ಎಸ್.ಜೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು. ಪೂರ್ತಿ ವಂದಿಸಿ, ಅನನ್ಯ ಮಾಧವ್ ಕಾರ್ಯಕ್ರಮ ನಿರೂಪಿಸಿದರು.






















































