
ಕಾರ್ಕಳ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ನವೋದಯ ಸರ್ಕಲ್ ಬಳಿ ನೀರು ಚರಂಡಿಗೆ ಹರಿಯದೆ ರಸ್ತೆಯಲ್ಲೇ ಹರಿಯುತ್ತಿದ್ದು ವಾಹನಗಳು ಚಲಿಸುವಾಗ ನೀರು ಪಾದಚಾರಿಗಳಿಗೆ ಚಿಮ್ಮಿ ತೊಂದರೆಯಾಗುವುದನ್ನು ಗಮನಿಸಿದ ,ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ರವರ ನೇತೃತ್ವದಲ್ಲಿ ಚರಂಡಿಯ ಮಣ್ಣನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು. ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಅಮೀನ್ , ವಸಂತ್ ಎಂ ಜೊತೆಗಿದ್ದರು.



















