
ಜುಲೈ 10, ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕಾರ್ಕಳ ವತಿಯಿಂದ ಗುರುವಂದನಾ ಕಾರ್ಯಕ್ರಮವು ಕುಕ್ಕುಂದೂರು ಗ್ರಾಮದಲ್ಲಿ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸುಲೋಚನಾ ನಾಯಕ್ ಅವರ ಮನೆಗೆ ತೆರಳಿ ಮಹಿಳಾ ಮೋರ್ಚಾ ತಂಡ ಮತ್ತು ಅವರ ಶಿಷ್ಯಂದಿರು ಒಡಗೂಡಿ ಅಭಿನಂದಿಸಿ, ಗುರುವಂದನೆ ಸಲ್ಲಿಸಲಾಯಿತು.
ಸುಮಾರು 34 ವರ್ಷಗಳಲ್ಲಿ ನಿರಂತರವಾಗಿ ಪಳ್ಳಿ, ಕಣಜಾರು, ಕಾಬೆಟ್ಟು ಮೊದಲಾದೆಡೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ , ಜನಾನುರಾಗಿದ್ದ ಶ್ರೀಮತಿಯವರು ಸಾವಿರಾರು ಶಿಷ್ಯಂದಿರನ್ನು ಹೊಂದಿದ್ದು ಇವರು ಸೇವಾದಳ, ಯೋಗ, ಯಕ್ಷಗಾನ, ಭಜನೆ ಇತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾರ್ಗದರ್ಶನ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಕ್ಷೇತ್ರದ್ಯಕ್ಷರಾದ ನವೀನ್ ನಾಯಕ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಮಹಿಳಾ ಮೋರ್ಚಾ ಮಾರ್ಗದರ್ಶಕರಾದ ರವೀಂದ್ರ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿನಯಾ ಡಿ ಬಂಗೇರ, ಪ್ರಧಾನ ಕಾರ್ಯದರ್ಶಿಗಳಾದ ಸುಮಾ ರವಿಕಾಂತ್, ವಿನುತಾ ಆಚಾರ್ಯ, ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಮಮತಾ ಸುವರ್ಣ, ತಾಲೂಕು ಉಪಾಧ್ಯಕ್ಷರುಗಳಾದ ಅಮೃತಾ ಪ್ರಭು, ಪಲ್ಲವಿ ಪ್ರವೀಣ್, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನೀತಾ ಆಚಾರ್ಯ, ಶಕುಂತಲಾ ಶೆಟ್ಟಿ,ನಗರ ಉಪಾಧ್ಯಕ್ಷರಾದ ಶಿವಾನಿ ಶೆಟ್ಟಿಗಾರ್ ಹಾಗೂ ಶಿಷ್ಯಂದಿರಾದ ಶ್ರೀಮತಿ ದಿವ್ಯಾ, ಕು.ದಿಶಾ ಮತ್ತು ದಿಶಾಂತ್ ಉಪಸ್ಥಿತರಿದ್ದರು.