
ಕಾರ್ಕಳ: ನ. 4ರಂದು, ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಹಬ್ಬದ ವಿಶೇಷ ಖಾದ್ಯ ಅರಿಶಿನ ಎಲೆ ಸಿಹಿ ಕಡುಬನ್ನು ಮಹಿಳಾ ಮೋರ್ಚಾ ಸದಸ್ಯರು ಮನೆಮನೆಗಳಲ್ಲಿ ತಯಾರಿಸಿ ಆಶ್ರಮವಾಸಿಗಳಿಗೆ ನೀಡಿ ಸಹಭೋಜನದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕತೆ, ಕವನ, ಬರಹಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಆಶ್ರಮವಾಸಿ ಆಗಿರುವ ಪ್ರಕಾಶ್ ಪಡಿಯಾರ್ ಅವರನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಹಿಳಾ ಮೋರ್ಚಾ ವತಿಯಿಂದ ಅಭಿನಂದಿಸಲಾಯಿತು.
ಕ್ಷೇತ್ರಧ್ಯಕ್ಷರಾದ ನವೀನ್ ನಾಯಕ್, ರವೀಂದ್ರ ಕುಮಾರ್, ವಿಕ್ರಂ ಹೆಗ್ಡೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಮಹಿಳಾ ಮೋರ್ಚಾ ಕಾರ್ಕಳದ ಅಧ್ಯಕ್ಷರಾದ ವಿನಯ ಡಿ ಬಂಗೇರ, ಜಿಲ್ಲಾ ಉಪಾಧ್ಯಕ್ಷರಾದ ಮಾಲಿನಿ ಜೆ ಶೆಟ್ಟಿ , ಕಾರ್ಕಳ ಮಹಿಳಾ ಮೋರ್ಚಾಪ್ರಧಾನ ಕಾರ್ಯದರ್ಶಿ ವಿನುತ ಆಚಾರ್ಯ , ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಮಮತಾ ಸುವರ್ಣ, ವಾಣಿ ಶೆಟ್ಟಿ, ಪದಾಧಿಕಾರಿಗಳಾದ ಅಮೃತ ಪ್ರಭು, ಪ್ರಮೀಳಾ ದಿನೇಶ್, ಶೋಭಾ ಶ್ರೀಧರ್ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.






















































